ನವದೆಹಲಿ: ಈಶಾನ್ಯ ರಾಜ್ಯಗಳಲ್ಲಿ ನರಮೇಧ ನಡೆಸುತ್ತಿರುವ ನಕ್ಸಲರು ಇದೀಗ ಮಕ್ಕಳಿಗೂ ವಿಧ್ವಂಸಕ ಕೃತ್ಯಗಳ ತರಬೇತಿ ನೀಡುತ್ತಿದ್ದಾರೆ ಎಂಬ ಆತಂಕಕಾರಿ ವಿಷಯವನ್ನು ಗೃಹ ಇಲಾಖೆ ಬಯಲು ಮಾಡಿದೆ.
ಲೋಕಸಭೆಯಲ್ಲಿ ಈ ಬಗ್ಗೆ ಗೃಹ ಇಲಾಖೆ ರಾಜ್ಯ ಖಾತೆ ಸಚಿವ ಜಿ. ಕಿಶನ್ ರೆಡ್ಡಿ ಲಿಖಿತ ಉತ್ತರ ನೀಡಿದರು. ಮಕ್ಕಳನ್ನೂ ತಮ್ಮೊಂದಿಗೆ ಸೇರಿಸಿಕೊಳ್ಳುತ್ತಿರುವ ನಕ್ಸಲರು, ಅವರ ಮೂಲಕ ಅನೇಕ ಕೆಲಸ ಮಾಡಿಕೊಳ್ಳುತ್ತಿದ್ದಾರೆ. ಅಲ್ಲದೆ, ಮಿಲಿಟರಿ ತರಬೇತಿಯನ್ನೂ ನೀಡುತ್ತಿದ್ದಾರೆ ಎಂದು ಹೇಳಿದ್ದಾರೆ.ಜಾರ್ಖಂಡ್, ಛತ್ತೀಸ್ಗಢದ ಮಕ್ಕಳ ಮೂಲಕ ಆಹಾರ ತಯಾರಿಕೆ, ಅಗತ್ಯ ವಸ್ತುಗಳ ಸರಬರಾಜು ಹಾಗೂ ಭದ್ರತಾ ಪಡೆಯ ಚಲನವಲನಗಳ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ ಎಂದು ಹೇಳಿದರು.