ನಾಗ್ಪುರ: ನಕ್ಸಲರ ಗುಂಪು ನಡೆಸಿದ ಹಲ್ಲೆಯಿಂದ ಪೊಲೀಸ್ ಕಾನ್ಸ್ಟೇಬಲ್ ಸಾವನ್ನಪ್ಪಿದ್ದು, ಮತ್ತೊಬ್ಬರು ಗಾಯಗೊಂಡಿದ್ದಾರೆ ಎಂದು ಮಹಾರಾಷ್ಟ್ರದ ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಮೇಲೆ ನಕ್ಸಲರಿಂದ ದಾಳಿ: ಓರ್ವ ಕಾನ್ಸ್ಟೇಬಲ್ ಹುತಾತ್ಮ - ನಕ್ಸಲರಿಂದ ದಾಳಿಯಿಂದ ಪೊಲೀಸ್ ಕಾನ್ಸ್ಟೇಬಲ್
ಮಹಾರಾಷ್ಟ್ರದಲ್ಲಿ ಇಬ್ಬರು ಪೊಲೀಸ್ ಕಾನ್ಸ್ಟೇಬಲ್ಗಳ ಮೇಲೆ ನಕ್ಸಲರ ಗುಂಪು ದಾಳಿ ನಡೆಸಿದ್ದು, ಓರ್ವ ಕಾನ್ಸ್ಟೇಬಲ್ ಹುತಾತ್ಮರಾಗಿದ್ದಾರೆ.
ಪೋಲೀಸರ ಮೇಲೆ ನಕ್ಸಲರಿಂದ ದಾಳಿ
ಮಹಾರಾಷ್ಟ್ರದ ನಾಗ್ಪುರದಿಂದ 170 ಕಿ.ಮೀ ದೂರದಲ್ಲಿರುವ ನಕ್ಸಲ್‌ಪೀಡಿತ ಭಾಮರಗಢ್ ತಾಲೂಕಿನ ಕೋಟಿ ಗ್ರಾಮದಲ್ಲಿ ಈ ದಾಳಿ ನಡೆದಿದೆ.
ನಕ್ಸಲ್ ಹೋರಾಟಗಾರರ ತಂಡ ಹಲ್ಲೆ ನಡೆಸಿದಾಗ ಇಬ್ಬರು ಕಾನ್ಸ್ಟೇಬಲ್ಗಳು ಅಂಗಡಿಯಲ್ಲಿದ್ದರು ಎಂದು ಹೇಳಿದ್ದಾರೆ. ಕಾನ್ಸ್ಟೇಬಲ್ಗಳಲ್ಲಿ ದುಶ್ಯಂತ್ ನಂದೇಶ್ವರ ಎಂಬುವವರು ಹುತಾತ್ಮರಾಗಿದ್ದು, ವಿನೋದ್ ಭೋಸ್ಲೆ ಎಂಬುವವರು ಗಾಯಗೊಂಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.