ಗಡ್ಚಿರೋಲಿ (ಮಹಾರಾಷ್ಟ್ರ): ಮಹಾರಾಷ್ಟ್ರ ಮತ್ತು ಛತ್ತೀಸ್‌ಗಢದ ಗಡಿಯಲ್ಲಿರುವ ಗಡ್ಚಿರೋಲಿ ಜಿಲ್ಲೆಯ ಕಾಡಿನಿಂದ ಹಿರಿಯ ನಕ್ಸಲ್ ದಂಪತಿಯನ್ನು ಬಂಧಿಸಲಾಗಿದೆ.
ಮಹಾರಾಷ್ಟ್ರ - ಛತ್ತೀಸ್‌ಗಢದ ಗಡಿಯಲ್ಲಿ ನಕ್ಸಲ್ ದಂಪತಿ ಬಂಧನ - ನಕ್ಸಲ್ ದಂಪತಿ ಬಂಧನ
ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯಲ್ಲಿ ಹಿರಿಯ ನಕ್ಸಲ್ ನಾಯಕ ಮತ್ತು ಆತನ ಪತ್ನಿಯನ್ನು ಬಂಧಿಸಲಾಗಿದೆ. ನಕ್ಸಲ್ ದಂಪತಿ ಮಾವೋವಾದಿಗಳಿಗೆ ಸಂಬಂಧಿಸಿದ ಹಲವಾರು ಘಟನೆಗಳಲ್ಲಿ ಭಾಗಿಯಾಗಿದ್ದರು.
naxal
ಯಕ್ಷ್ವಂತ್ ಅಲಿಯಾಸ್ ದಯಾರಾಮ್ ಬೊಗಾ (35) ಮತ್ತು ಅವರ ಪತ್ನಿ ಶಾರದಾ ಅಲಿಯಾಸ್ ಸುಮಿತ್ರ ನೇತಮ್ (32) ಸಕ್ರಿಯ ನಕ್ಸಲ್ ಕೇಡರ್ ಆಗಿದ್ದು, ಇಬ್ಬರ ವಿರುದ್ಧ ಹಲವು ಪ್ರಕರಣಗಳಿವೆ.
"ಅವರು ಸುಮಾರು 35 ಪೊಲೀಸ್ - ನಕ್ಸಲ್ ಎನ್ಕೌಂಟರ್ಗಳಲ್ಲಿ ಭಾಗಿಯಾಗಿದ್ದರು ಮತ್ತು ಅವರನ್ನು ಹಿಡಿದುಕೊಟ್ಟವರಿಗೆ ಅಥವಾ ಅವರ ಕುರಿತು ಸುಳಿವು ನೀಡಿದವರಿಗೆ 16 ಲಕ್ಷ ರೂ. ನಗದು ಬಹುಮಾನದ ಘೋಷಣೆಯಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.