ದಂತೇವಾಡ (ಛತ್ತೀಸ್ಘಡ):ದಂತೇವಾಡದಲ್ಲಿ ನಕ್ಸಲ್ ನಾಯಕನೋರ್ವ ಪೊಲೀಸರಿಗೆ ಶರಣಾಗಿದ್ದು, ಆತನಿಗಾಗಿ ಪೊಲೀಸರು 8 ಲಕ್ಷ ರೂ. ಬಹುಮಾನ ಘೋಷಿಸಿದ್ದರು.
ದಂತೇವಾಡದಲ್ಲಿ ಪೊಲೀಸರಿಗೆ ಶರಣಾದ ನಕ್ಸಲ್ ನಾಯಕ - ದಂತೇವಾಡ ಸುದ್ದಿ
ಛತ್ತೀಸ್ಘಡದ ದಂತೇವಾಡದಲ್ಲಿ ನಕ್ಸಲ್ ನಾಯಕನೋರ್ವ ಪೊಲೀಸರಿಗೆ ಶರಣಾಗಿದ್ದಾನೆ.
![ದಂತೇವಾಡದಲ್ಲಿ ಪೊಲೀಸರಿಗೆ ಶರಣಾದ ನಕ್ಸಲ್ ನಾಯಕ Naxal](https://etvbharatimages.akamaized.net/etvbharat/prod-images/768-512-8976893-835-8976893-1601344921809.jpg)
ನಕ್ಸಲ್
ಕೋಸಾ ಮರ್ಕಮ್ ಎಂಬಾತ ಶರಣಾದ ನಕ್ಸಲ್ ನಾಯಕ. ಈತ ಹಲವು ದಾಳಿಗಳಲ್ಲಿ ಭಗಿಯಾಗಿದ್ದಾನೆ ಎನ್ನಲಾಗಿದೆ. ಅಲ್ಲದೆ ನಕ್ಸಲರಿಗೆ ತರಬೇತಿ ನೀಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಶರಣಾದ ನಕ್ಸಲ್ಗೆ 10 ಸಾವಿರ ರೂ. ನೀಡಲಾಗಿದ್ದು, ಸರ್ಕಾರದ ನಿಯಮದಂತೆ ಮುಂದಿನ ಪರಿಹಾರ ನೀಡುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.