ದಾಂತೇವಾಡ (ಛತ್ತೀಸ್ಗಡ): ದಾಂತೇವಾಡ - ಬಿಜಾಪುರ ಅಂತರ ಜಿಲ್ಲಾ ಗಡಿಯಲ್ಲಿರುವ ಕಿರಾಂಡುಲ್ ಪೊಲೀಸ್ ಠಾಣೆ ಪ್ರದೇಶದ ಎಂಡ್ರಿಪಾಲ್ ಕಾಡಿನಲ್ಲಿ ಮಂಗಳವಾರ ನಕ್ಸಲರ ಶಿಬಿರದ ಮೇಲೆ ಪೊಲೀಸರು ದಾಳಿ ನಡೆಸಿ ಸ್ಫೋಟಕ ವಸ್ತುಗಳನ್ನು ವಶಪಡಿಸಿಕೊಂಡು ನಾಶಪಡಿಸಿದ್ದಾರೆ.
ನಕ್ಸಲ್ ಕ್ಯಾಂಪ್ ಮೇಲೆ ದಾಳಿ: ಅಪಾರ ಪ್ರಮಾಣದ ಸ್ಫೋಟಕ ನಾಶ - ಎಂಡ್ರಿಪಾಲ್ ಕಾಡು
ಎಂಡ್ರಿಪಾಲ್ ಕಾಡಿನಲ್ಲಿರುವ ನಕ್ಸಲ್‌ಗಳ ಶಿಬಿರಗಳ ಮೇಲೆ ಛತ್ತೀಸ್ಗಢ ಪೊಲೀಸರು ದಾಳಿ ನಡೆಸಿ ಅಪಾರ ಪ್ರಮಾಣದ ಸ್ಫೋಟಕಗಳನ್ನು ನಾಶಪಡಿಸಿದ್ದಾರೆ.

ನಕ್ಸಲ್ ಕ್ಯಾಂಪ್
ದಂತೇವಾಡಾ ಡಿಆರ್‌ಜಿ ಪಡೆಗಳು ಗುಪ್ತಚರ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿ ಅಪಾರ ಪ್ರಮಾಣದ ಸ್ಫೋಟಕಗಳು ಹಾಗೂ ಕ್ಯಾಂಪಿಂಗ್ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ದಾಳಿ ವೇಳೆ 315 ಬೋರ್ ರೈಫಲ್, ಟೆಂಟ್ ವಸ್ತುಗಳು, ನಕ್ಸಲ್ ಸಮವಸ್ತ್ರ, ಐಇಡಿ ಸ್ವಿಚ್ ಮತ್ತು ದೈನಂದಿನ ಅಗತ್ಯತೆಗಳ ಇತರ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.