ಮುಜಫರ್ನಗರ (ಉ.ಪ್ರ): ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ ಮತ್ತು ಅವರ ಕುಟುಂಬವನ್ನು ಮುಜಫರ್ನಗರ ಜಿಲ್ಲೆಯ ಬುಧಾನಾದಲ್ಲಿರುವ ಅವರ ಮನೆಯಲ್ಲಿ 14 ದಿನಗಳ ಕಾಲ ಕ್ವಾರಂಟೈನ್ನಲ್ಲಿರಿಸಲಾಗಿದೆ.
ನವಾಜುದ್ದೀನ್ ಹಾಗೂ ಕುಟುಂಬದವರ ಕೊರೊನಾ ವರದಿ ನೆಗೆಟಿವ್... 14 ದಿನ ಹೋಂ ಕ್ವಾರಂಟೈನ್ - 14 ದಿನ ಹೋಂ ಕ್ವಾರಂಟೈನ್
ಟ್ರಾವೆಲ್ ಪಾಸ್ ತೆಗೆದುಕೊಂಡು ನವಾಜುದ್ದೀನ್ ತನ್ನ ಕುಟುಂಬದವರೊಂದಿಗೆ ಮನೆಗೆ ಮರಳಿದ್ದರು. ಕೊವಿಡ್-19 ಪರೀಕ್ಷೆ ನಡೆಸಿದಾಗ, ನೆಗೆಟಿವ್ ವರದಿ ಬಂದಿದೆ. ಅವರ ಮನೆಯಲ್ಲಿಯೇ 14 ದಿನಗಳ ಕಾಲ ಕ್ವಾರಂಟೈನ್ನಲ್ಲಿರಿಸಲಾಗಿದೆ.
![ನವಾಜುದ್ದೀನ್ ಹಾಗೂ ಕುಟುಂಬದವರ ಕೊರೊನಾ ವರದಿ ನೆಗೆಟಿವ್... 14 ದಿನ ಹೋಂ ಕ್ವಾರಂಟೈನ್ navazuddin](https://etvbharatimages.akamaized.net/etvbharat/prod-images/768-512-7243631-1010-7243631-1589781763866.jpg)
navazuddin
ಟ್ರಾವೆಲ್ ಪಾಸ್ ತೆಗೆದುಕೊಂಡು ನವಾಜುದ್ದೀನ್ ತನ್ನ ಕುಟುಂಬದವರೊಂದಿಗೆ ಮೇ 15ರಂದು ತಮ್ಮ ಮನೆಗೆ ತಲುಪಿದ್ದರು. ಕೊವಿಡ್-19 ಪರೀಕ್ಷೆ ನಡೆಸಿದಾಗ ಎಲ್ಲರ ನೆಗೆಟಿವ್ ವರದಿ ಬಂದಿದೆ.
ಅವರ ತಾಯಿ, ಸಹೋದರ ಮತ್ತು ಅತ್ತಿಗೆ ಕೂಡ ಅವರೊಂದಿಗೆ ಖಾಸಗಿ ವಾಹನದಲ್ಲಿ ತಮ್ಮ ಊರಿಗೆ ಮರಳಿದ್ದರು.ಆರೋಗ್ಯಾಧಿಕಾರಿಗಳು ಮನೆಗೆ ಭೇಟಿ ನೀಡಿ, 14 ದಿನಗಳ ಕಾಲ ಕ್ವಾರಂಟೈನ್ನಲ್ಲಿರುವಂತೆ ಸೂಚಿಸಿದ್ದಾರೆ ಎಂದು ಬುಧಾನಾ ಪೊಲೀಸ್ ವಲಯದ ಎಸ್‌ಎಚ್‌ಒ ಕುಶಾಲ್ಪಾಲ್ ಸಿಂಗ್ ಹೇಳಿದ್ದಾರೆ.