ಕರ್ನಾಟಕ

karnataka

ETV Bharat / bharat

ಮಾಲ್ಡೀವ್ಸ್​​​ನಿಂದ ಮರಳಿದ ಕೆಲವೇ ಕ್ಷಣಗಳಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ತಾಯಿ - ನೌಕಾಪಡೆ

ಐಎನ್​ಎಸ್​ ಜಲಾಶ್ವ ಮೂಲಕ ಮಾಲ್ಡೀವ್ಸ್​​ನಿಂದ ಭಾರತಕ್ಕೆ ಬಂದ ಕೆಲವೇ ಕ್ಷಣಗಳಲ್ಲಿ ಕೇರಳದ ಮಹಿಳೆಯೊಬ್ಬರು ಮಗುವಿಗೆ ಜನ್ಮ ನೀಡಿದ್ದಾರೆ.

baby
baby

By

Published : May 12, 2020, 8:57 AM IST

ಕೊಚ್ಚಿ (ಕೇರಳ): ಮಾಲ್ಡೀವ್ಸ್​ನಲ್ಲಿ ಸಿಲುಕಿಕೊಂಡಿದ್ದ ಮಹಿಳೆಯೊಬ್ಬರು ನೌಕಾಪಡೆಯ ನೆರವಿನಿಂದ ಭಾರತಕ್ಕೆ ಮರಳಿದ ಕೆಲವೇ ಕ್ಷಣಗಳಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

ಐಎನ್‌ಎಸ್ ಜಲಶ್ವಾದಿಂದ ಹೊರಬಂದು ಸ್ವಲ್ಪ ಸಮಯದ ನಂತರ ಮಗುವಿಗೆ ಜನ್ಮ ನೀಡಿದ ಈ ಕೇರಳದ ತಾಯಿಯನ್ನು ನೌಕಾಪಡೆಯ ಸದರ್ನ್ ನೇವಲ್ ಕಮಾಂಡ್ (ಎಸ್‌ಎನ್‌ಸಿ) ಅಭಿನಂದಿಸಿದೆ.

ಮಾಲ್ಡೀವ್ಸ್​ನಲ್ಲಿ ಸಿಲುಕಿದ್ದ 698 ಭಾರತೀಯರನ್ನು ಐಎನ್‌ಎಸ್ ಜಲಶ್ವಾ ಮೂಲಕ ಭಾರತಕ್ಕೆ ಕರೆತರಲಾಗಿತ್ತು. ಅದರ ಮೂಲಕವೇ ಸೋನಿಯಾ ಜಾಕೋಬ್ ಭಾರತಕ್ಕೆ ಬಂದಿದ್ದರು.

ಎಸ್‌ಎನ್‌ಸಿ ಪ್ರತಿನಿಧಿ ಲೆಫ್ಟಿನೆಂಟ್ ಕಮಾಂಡರ್ ರೆಮ್ಯಾ ಸ್ಯಾವಿ ಮಹಿಳೆ ಹಾಗೂ ಆಕೆಯ ಕುಟುಂಬದವರಿಗೆ ಶುಭಕೋರಿದರು. ಇದೀಗ ತಾಯಿ ಹಾಗೂ ಮಗು ಆರೋಗ್ಯವಾಗಿದ್ದು, ಸದ್ಯ ಕ್ವಾರಂಟೈನ್​ನಲ್ಲಿದ್ದಾರೆ.

ABOUT THE AUTHOR

...view details