ಅಹಮದಾಬಾದ್: ನವರಾತ್ರಿ ಬಂದರೆ ಉತ್ತರ ಭಾರತದಲ್ಲಿ ದಾಂಡಿಯಾ ರಾಸ್ ಮತ್ತು ಗರ್ಬಾ ನೃತ್ಯ ಆರಂಭವಾಗುತ್ತವೆ. ಸಂಜೆ ವೇಳೆಗೆ ಒಂದೆಡೆ ಸೇರಿ ಕೋಲಾಟ, ದಾಂಡಿಯಾ ಸೇರಿದಂತೆ ವಿವಿಧ ಬಗೆಯ ನೃತ್ಯಗಳನ್ನು ಮಾಡುವುದು ಇಲ್ಲಿನ ಸಂಪ್ರದಾಯ.
ಗರ್ಬಾ ನೃತ್ಯಕ್ಕಾಗಿ ಬೆನ್ನ ಮೇಲೆ ಮೋದಿ, ಟ್ರಂಪ್ ಟ್ಯಾಟೂ... ತಲೆ ಮೇಲೆ ಹೆಲ್ಮೆಟ್
ನವರಾತ್ರಿ ಉತ್ಸವದ ಆಚರಣೆ ಉತ್ತರ ಭಾರತದಲ್ಲಿ ದಾಂಡಿಯಾ ರಾಸ್ ಮತ್ತು ಗರ್ಬಾ ನೃತ್ಯಗಳು ಜೋರಾಗಿ ನಡೆಯುತ್ತವೆ. ವಿಶೇಷವೆಂದರೆ ಸೂರತ್‌ನ ಮಹಿಳೆಯರು ತಮ್ಮ ಬೆನ್ನ ಮೇಲೆ ಪ್ರಧಾನಿ ಮೋದಿ ಹಾಗೂ ಡೊನಾಲ್ಡ್ ಟ್ರಂಪ್ ಅವರ ಟ್ಯಾಟೂ ಹಾಕಿಸಿಕೊಂಡು ಎಲ್ಲರ ಗಮನ ಸೆಳೆದಿದ್ದಾರೆ. ಜೊತೆಗೆ ಹೆಲ್ಮೆಟ್ ಬಳಕೆಯ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಮತ್ತೊಂದು ಗುಂಪು ಹೆಲ್ಮೆಟ್ ಧರಿಸಿ ಗಾರ್ಬಾ ನೃತ್ಯ ಪ್ರದರ್ಶಿಸಿದ್ದಾರೆ.
ಬೆನ್ನಿನ ಮೇಲೆ ಮೋದಿ, ಟ್ರಂಪ್ ಚಿತ್ರ
ಆದರೆ, ಈ ಬಾರಿ ನೃತ್ಯಪಟಗಳು ನಾನಾ ರೀತಿಯ ವಿಶೇಷತೆಗಳನ್ನು ಅಲಂಕರಿಸಿಕೊಂಡು ದಾಂಡಿಯಾ ರಾಸ್ ಮತ್ತು ಗರ್ಬಾ ನೃತ್ಯಕ್ಕೆ ಸಜ್ಜಾಗುತ್ತಿದ್ದಾರೆ. ಕೆಲವು ಮಹಿಳೆಯರು ತಮ್ಮ ಬೆನ್ನ ಮೇಲೆ ಪ್ರಧಾನಿ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಟ್ಯಾಟೂ ಹಾಕಿಸಿಕೊಂಡು ನೃತ್ಯಕ್ಕೆ ಅಣಿಯಾಗುತ್ತಿದ್ದಾರೆ.
ಇತ್ತೀಚೆಗೆ ಜಾರಿಗೊಳಿಸಲಾಗಿರುವ ಕೇಂದ್ರ ಮೋಟಾರು ವಾಹನ ಕಾಯ್ದೆಯ ತಿದ್ದುಪಡಿ ಅನ್ವಯ ಹೆಚ್ಚಿಸಲಾದ ಜುಲ್ಮಾನೆಗಳ ಕುರಿತು ಜಾಗೃತಿ ಮೂಡಿಸುವ ಟ್ಯಾಟೂಗಳನ್ನು ಹಾಕಿಸಿಕೊಂಡು ಗಮನ ಸೇಳೆದಿದ್ದರು. ಸೂರತ್‌ನ ಗರ್ಬಾ ಕ್ಲಾಸ್ನ ನೃತ್ಯಗಾರರು ತಮ್ಮ ತಲೆಯಲ್ಲಿ ಹೆಲ್ಮೆಟ್ ಧರಿಸಿಕೊಂಡು ನೃತ್ಯ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.Last Updated : Sep 30, 2019, 7:08 AM IST