ಕರ್ನಾಟಕ

karnataka

ETV Bharat / bharat

ಐಎನ್ಎಸ್ ವಿಕ್ರಮಾದಿತ್ಯನಿಂದ ಯಶಸ್ವಿಯಾಗಿ ಆಗಸಕ್ಕೆ ಜಿಗಿದ 'ತೇಜಸ್​ ಎಂಕೆ1' - 'ತೇಜಸ್​ ಎಂಕೆ1' ಲೇಟೆಸ್ಟ್​ ಸುದ್ದಿ

ಶನಿವಾರವಷ್ಟೇ ಐಎನ್ಎಸ್ ವಿಕ್ರಮಾದಿತ್ಯ ನೌಕೆಯ ಮೇಲೆ ಮೊಟ್ಟ ಮೊದಲ ಬಾರಿಗೆ 'ತೇಜಸ್‌' ಯಶಸ್ವಿಯಾಗಿ ಬಂದಿಳಿದು ಭಾರತೀಯ ಯುದ್ಧ ವಿಮಾನ ಅಭಿವೃದ್ಧಿ ಕಾರ್ಯಕ್ರಮದ ಇತಿಹಾಸದಲ್ಲಿ ಮೈಲಿಗಲ್ಲು ಸಾಧಿಸಿತ್ತು. ಇದೀಗ ವಿಕ್ರಮಾದಿತ್ಯ ನೌಕೆಯಿಂದ ಯಶಸ್ವಿಯಾಗಿ ಟೇಕ್​ ಆಫ್ ಆಗಿ ಮತ್ತೊಂದು ಮೈಲಿಗಲ್ಲು ಸಾಧಿಸಿದೆ.

Naval Light Combat Aircraft
ಐಎನ್ಎಸ್ ವಿಕ್ರಮಾದಿತ್ಯನಿಂದ ಯಶಸ್ವಿಯಾಗಿ ಟೇಕ್​ ಆಫ್​ ಆದ 'ತೇಜಸ್​ ಎಂಕೆ1'

By

Published : Jan 12, 2020, 9:27 PM IST

ನವದೆಹಲಿ: ಐಎನ್ಎಸ್ ವಿಕ್ರಮಾದಿತ್ಯ ನೌಕೆಯಿಂದ ಯಶಸ್ವಿಯಾಗಿ ಸ್ಕೀ-ಜಂಪ್ ಟೇಕ್​ ಆಫ್​ ಆಗುವ ಮೂಲಕ ಲಘು ಯುದ್ಧ ವಿಮಾನ 'ತೇಜಸ್​ ಎಂಕೆ1' ಮತ್ತೊಂದು ಪ್ರಮುಖ ಮೈಲಿಗಲ್ಲು ಸಾಧಿಸಿದೆ.

ಶನಿವಾರವಷ್ಟೇ ಐಎನ್ಎಸ್ ವಿಕ್ರಮಾದಿತ್ಯ ನೌಕೆಯ ಮೇಲೆ ಮೊಟ್ಟ ಮೊದಲ ಬಾರಿಗೆ 'ತೇಜಸ್‌' ಯಶಸ್ವಿಯಾಗಿ ಬಂದಿಳಿದು ಭಾರತೀಯ ಯುದ್ಧ ವಿಮಾನ ಅಭಿವೃದ್ಧಿ ಕಾರ್ಯಕ್ರಮದ ಇತಿಹಾಸದಲ್ಲಿ ಮೈಲಿಗಲ್ಲು ಸಾಧಿಸಿತ್ತು. ಇದೀಗ ವಿಕ್ರಮಾದಿತ್ಯ ನೌಕೆಯಿಂದ ಯಶಸ್ವಿಯಾಗಿ ಟೇಕ್​ ಆಫ್ ಆಗಿ ಗಮನ ಸೆಳೆದಿದೆ.

'ಐಎನ್ಎಸ್ ವಿಕ್ರಮಾದಿತ್ಯ', ದೇಶದ ಏಕೈಕ ಯುದ್ಧ ವಿಮಾನವಾಗಿದ್ದು, 'ತೇಜಸ್​ ಎಂಕೆ1', ದೇಶೀಯ ನಿರ್ಮಿತ ನೌಕಾ ಆವೃತ್ತಿಯ ಲಘು ಯುದ್ಧ ವಿಮಾನವಾಗಿದೆ. ಇನ್ನು ಫೈಟರ್ ಜೆಟ್‌ಗಳಿಗೆ ಲಿಫ್ಟ್ ಒದಗಿಸಲು ವಿನ್ಯಾಸಗೊಳಿಸಲಾದ ವಿಮಾನವಾಹಕ ನೌಕೆಗಳ ಡೆಕ್‌ನಲ್ಲಿ ಮೇಲ್ಮುಖವಾಗಿ ಬಾಗಿದ ರಾಂಪ್​ಗೆ ಸ್ಕೀ-ಜಂಪ್ ಎನ್ನುತ್ತಾರೆ.

ABOUT THE AUTHOR

...view details