ನವದೆಹಲಿ: ಅಯೋಧ್ಯೆಯಲ್ಲಿ ರಾಮ ದೇವಸ್ಥಾನವನ್ನು ನಿರ್ಮಿಸಲು ‘ನಿಧಿ ಸಮರ್ಪಣೆ ಅಭಿಯಾನ’ಕ್ಕೆ ಇಂದು ಚಾಲನೆ ಸಿಗಲಿದ್ದು, ರಾಷ್ಟ್ರಪತಿ ರಾಮನಾಥ್ ಕೋವಿಂದ್ ದೇಣಿಗೆ ನೀಡಿ, ಶುಭಕೋರುವ ಮೂಲಕ ಈ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ.
ಇಂದು, ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಖಜಾಂಚಿ ಸ್ವಾಮಿ ಗೋವಿಂದ್ ದೇವ್ ಗಿರಿ ಮಹಾರಾಜ್ ಮತ್ತು ವಿಶ್ವ ಹಿಂದೂ ಪರಿಷತ್ನ ಕಾರ್ಯಾಧ್ಯಕ್ಷ ಅಲೋಕ್ ಕುಮಾರ್ ಕಟ್ಟಡ ನಿರ್ಮಾಣ ಸಮಿತಿ ಅಧ್ಯಕ್ಷ ನೃಪೇಂದ್ರ ಮಿಶ್ರಾ ಮತ್ತು ದೆಹಲಿ ಪ್ರಾಂತ್ಯದ ಆರ್‌ಎಸ್‌ಎಸ್ ಮುಖಂಡ ಕುಲಭೂಷಣ ಅಹುಜಾ 11 ಗಂಟೆಗೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರನ್ನು ಭೇಟಿ ಮಾಡಿ ಅಯೋಧ್ಯೆಯಲ್ಲಿ ನಿರ್ಮಿಸುತ್ತಿರುವ ಶ್ರೀರಾಮ ಮಂದಿರಕ್ಕೆ ದೇಣಿಗೆ ಸಂಗ್ರಹಿಸಲಿದ್ದಾರೆ.
ಈ ಶುಭಕಾರ್ಯಕ್ಕೆ ಹಾರೈಸಲು ಪ್ರಧಾನಿ ನರೇಂದ್ರ ಮೋದಿಯವರನ್ನು ಸಮಯ ಕೇಳಲಾಗಿದೆ.
ಇದನ್ನೂ ಓದಿ: 'ರಾಮಸೇತು' ಸಂಶೋಧನೆಗೆ ಕೇಂದ್ರ ಸಂಸ್ಕೃತಿ ಸಚಿವಾಲಯ ಅನುಮೋದನೆ
ರಾಮ ಮಂದಿರಕ್ಕೆ ನಿಧಿ ಸಂಗ್ರಹ ಹೆಸರಲ್ಲಿ ವಂಚನೆ:ಉದಯಪುರ ಜಿಲ್ಲೆಯಲ್ಲಿ ಅಯೋಧ್ಯೆ ರಾಮ ಮಂದಿರಕ್ಕೆ ನಿಧಿ ಸಂಗ್ರಹ ಹೆಸರಲ್ಲಿ, ಅನಧಿಕೃತ ಸಂಘಟನೆಯ ಹೆಸರಿನ ರಶೀದಿ ನೀಡಿ ಹಣ ಸಂಗ್ರಹಿಸುತ್ತಿದ್ದ ಯುವಕನನ್ನು ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಅನಧಿಕೃತ ಸಂಘಟನೆಯ ಹೆಸರಿನ ರಶೀದಿ ಕೆಲವು ಯುವಕರು ಕೇಸರಿಯಾ ಹಿಂದೂ ಪರಿಷತ್ ಹೆಸರಿನಲ್ಲಿ ರಾಮ ಮಂದಿರಕ್ಕಾಗಿ ಹಣವನ್ನು ಸಂಗ್ರಹಿಸುತ್ತಿದ್ದಾರೆ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ನಿಧಿ ಸಮರ್ಪಣಾ ಸಮಿತಿಯ ಉದಯಪುರ ಮಹಾನಗರ ಮುಖ್ಯಸ್ಥ ಅಶೋಕ್ ಪ್ರಜಾಪತ್ ಹೇಳಿದ್ದಾರೆ. ಈ ಬಗ್ಗೆ ಅವರಿಗೆ ಬುಧವಾರ ಮಾಹಿತಿ ಸಿಕ್ಕಿದ್ದು, ಗುರುವಾರ ಬೆಳಗ್ಗೆಯಿಂದ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಆತನನ್ನು ಹುಡುಕತೊಡಗಿದರು. ಸಂಜೆ ಸಿಕ್ಕಿಬಿದ್ದ ಯುವಕನನ್ನು ಸುಖರ್ ಪೊಲೀಸ್ ಠಾಣೆಗೆ ಒಪ್ಪಿಸಿದರು. ಈ ಬಗ್ಗೆ ಉದಯಪುರದ ಸುಖರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.