ಕರ್ನಾಟಕ

karnataka

ETV Bharat / bharat

ಲಸಿಕೆ ಅಭಿವೃದ್ಧಿಪಡಿಸುವಲ್ಲಿ ಭಾರತದಂತಹ ದೇಶಗಳು ಪ್ರಮುಖ ಪಾತ್ರ ವಹಿಸಬೇಕು: WHO - ಜಾಗತಿಕ ಆರೋಗ್ಯ ಸಂಸ್ಥೆ

ಕೊರೊನಾ ಲಸಿಕೆ ಅಭಿವೃದ್ಧಿಪಡಿಸುವಲ್ಲಿ ಭಾರತದಂತಹ ರಾಷ್ಟ್ರಗಳು ಪ್ರಮುಖ ಪಾತ್ರ ವಹಿಸಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.

WHO
WHO

By

Published : Apr 29, 2020, 9:26 PM IST

ನವದೆಹಲಿ: ಆಗ್ನೇಯ ಏಷ್ಯಾ ಪ್ರದೇಶದ ವಿಶ್ವದ ಅತಿದೊಡ್ಡ ಲಸಿಕೆ ತಯಾರಕರಲ್ಲಿರುವ ಭಾರತ, ಇಂಡೋನೇಷ್ಯಾ ಮತ್ತು ಥಾಯ್ಲೆಂಡ್​​​​ ‌ನಂತಹ ದೇಶಗಳು ಪ್ರಸ್ತುತ ಕೊರೊನಾ ವೈರಸ್​ ನಿವಾರಿಸುವಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ತಿಳಿಸಿದೆ.

ಹೆಚ್ಚು ಅಗತ್ಯವಿರುವ ಕೊರೊನಾ ಲಸಿಕೆಗಳನ್ನು ಸಜ್ಜುಗೊಳಿಸುವ ಸಲುವಾಗಿ ಜಾಗತಿಕ ಆರೋಗ್ಯ ಸಂಸ್ಥೆ ಈ ಪ್ರದೇಶದ ಲಸಿಕೆ ತಯಾರಕರು ಮತ್ತು ರಾಷ್ಟ್ರೀಯ ನಿಯಂತ್ರಕ ಅಧಿಕಾರಿಗಳ ಸಭೆಯನ್ನು ಆಯೋಜಿಸಿತ್ತು.

ಭಾರತ, ಇಂಡೋನೇಷ್ಯಾ ಮತ್ತು ಥಾಯ್ಲೆಂಡ್​​ನಲ್ಲಿನ ಪ್ರಮುಖ ತಯಾರಕರು ಸಭೆಯಲ್ಲಿ ಸಮಯಸೂಚಿಗಳು ಮತ್ತು ಉತ್ಪಾದನಾ ಸಾಮರ್ಥ್ಯದ ಬಗ್ಗೆ ಚರ್ಚಿಸಿದರು. ಆದರೆ, ನಿಯಂತ್ರಣ ಸಂಸ್ಥೆಗಳು ಕೋವಿಡ್ ಲಸಿಕೆಗಳನ್ನು ತ್ವರಿತವಾಗಿ ಲಭ್ಯವಾಗುವಂತೆ ಮಾಡುವ ಪ್ರಕ್ರಿಯೆಗಳಲ್ಲಿ ಅಗತ್ಯವಿರುವ ಹೊಂದಾಣಿಕೆಗಳ ಬಗ್ಗೆ ಚರ್ಚಿಸಿದವು.

WHO ಪ್ರಕಾರ, ಕೊರೊನಾ ಲಸಿಕೆಯನ್ನು ದೊಡ್ಡ ಪ್ರಮಾಣದಲ್ಲಿ ಬಳಸುವ ಮೊದಲು ಹಲವಾರು ಹಂತಗಳನ್ನು ಪೂರ್ಣಗೊಳಿಸಬೇಕು.

ಇವುಗಳಲ್ಲಿ ಪೂರ್ವ - ಕ್ಲಿನಿಕಲ್ ಮತ್ತು ಕ್ಲಿನಿಕಲ್ ಪ್ರಯೋಗಗಳು, ಉತ್ಪಾದನೆ, ಪರವಾನಗಿ, ಲಸಿಕೆಗಳ ನಿಯೋಜನೆ ಮತ್ತು ಮಾರ್ಕೆಟಿಂಗ್ ನಂತರದ ಕಣ್ಗಾವಲು ಯೋಜನೆಗಳು ಸೇರಿವೆ. ಜಾಗತಿಕವಾಗಿ, ಏಳು ಅಭ್ಯರ್ಥಿಗಳ ಲಸಿಕೆಗಳು ಕ್ಲಿನಿಕಲ್ ಮೌಲ್ಯಮಾಪನದಲ್ಲಿವೆ ಮತ್ತು 82 ಲಸಿಕೆಗಳು ಪೂರ್ವ - ಕ್ಲಿನಿಕಲ್ ಮೌಲ್ಯಮಾಪನದಲ್ಲಿವೆ.

ABOUT THE AUTHOR

...view details