ಕರ್ನಾಟಕ

karnataka

ETV Bharat / bharat

ಭಾರತ ಮಾತಾ ಕಿ ಜೈ ಅನ್ನೋದು ರಾಷ್ಟ್ರಪ್ರೇಮವಲ್ಲ: ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು

ರಾಷ್ಟ್ರೀಯತೆ ಅಂದ್ರೆ ಮಾತಾ ಕಿ ಜೈ ಅನ್ನೋದಲ್ಲ. ಎಲ್ಲರಿಗಾಗಿ ಜೈ ಹೋ ಅನ್ನೋದು ದೇಶಭಕ್ತಿ. ತಾರತಮ್ಯ ಬಿಡುವಂತೆ ಯುವಕರಿಗೆ ಉಪರಾಷ್ಟ್ರಪತಿ ಕರೆ. ದೆಹಲಿ ವಿವಿ ವಿದ್ಯಾರ್ಥಿಗಳ ಜೊತೆ ವೆಂಕಯ್ಯ ನಾಯ್ಡು ಸಂವಾದ.

ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು

By

Published : Mar 24, 2019, 10:11 AM IST

Updated : Mar 24, 2019, 10:58 AM IST

ನವದೆಹಲಿ: ಭಾವಚಿತ್ರಕ್ಕೆ ಭಾರತ ಮಾತಾಕಿ ಜೈ, ಜೈ ಹೋ ಅನ್ನೋದು ರಾಷ್ಟ್ರೀಯತೆ ಅಲ್ಲ. ಎಲ್ಲರಿಗಾಗಿ ಜೈ ಹೋ ಅನ್ನೋದೇ ದೇಶಪ್ರೇಮ ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅಭಿಪ್ರಾಯಪಟ್ಟಿದ್ದಾರೆ.

ದೆಹಲಿ ವಿವಿ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದ ಅವರು, ಧರ್ಮ, ಜಾತಿ ಹಾಗೂ ಪ್ರದೇಶದ ಆಧಾರದ ಮೇಲೆ ಬೇಧ-ಭಾವ ಮಾಡುವುದನ್ನು ನಿಲ್ಲಿಸಬೇಕೆಂದು ಸಲಹೆ ನೀಡಿದ್ದಾರೆ.

ರಾಷ್ಟ್ರೀಯತೆ ಅಂದ್ರೆ ಭಾರತ ಮಾತಾ ಕಿ ಜೈ ಅನ್ನೋದಲ್ಲ. ಎಲ್ಲರಿಗಿಗಾಗಿ ಜೈ ಅನ್ನೋದೇ ನಿಜವಾದ ರಾಷ್ಟ್ರಪ್ರೇಮ. ಧರ್ಮ, ಜಾತಿ ಹಾಗೂ ನಗರ-ಗ್ರಾಮೀಣ ಪ್ರದೇಶದ ಆಧಾರದ ಮೇಲೆ ಜನರಲ್ಲಿ ಬೇಧ-ಭಾವ ಮಾಡಿದ್ರೆ ನೀವು ಭಾರತ ಮಾತಾ ಕಿ ಜೈ ಹೇಳಬಾರದು ಎಂದಿದ್ದಾರೆ.

ಶೈಕ್ಷಣಿಕ ಪದ್ಧತಿ ಬಗ್ಗೆ ಮಾತನಾಡಿರುವ ನಾಯ್ಡು, ವಸಾಹತುಶಾಹಿ ಮನೋಭಾವವನ್ನು ಕಿತ್ತೆಸೆದು ನಿಜವಾದ ಇತಿಹಾಸ, ಪ್ರಾಚೀನ ನಾಗರಿಕತೆ, ಸಂಸ್ಕೃತಿ ಹಾಗೂ ಪರಂಪರೆ ಹಾಗೂ ರಾಷ್ಟ್ರೀಯತೆಯ ಮೌಲ್ಯಗಳನ್ನು ವಿದ್ಯಾರ್ಥಿಗಳಿಗೆ ಕಲಿಸಬೇಕಿದೆ ಎಂದರು.

Last Updated : Mar 24, 2019, 10:58 AM IST

For All Latest Updates

TAGGED:

ABOUT THE AUTHOR

...view details