ಮಧುರೈ: ದೇಶದಲ್ಲಿ ಲಾಕ್ಡೌನ್ ಮೇ 3ರವರೆಗೆ ಮುಂದುವರಿದಿದ್ದು, ಇದರಿಂದ ಅನೇಕ ಬಡವರು, ಭಿಕ್ಷುಕರು, ನಿರ್ಗತಿಕರು ತೊಂದರೆಗೊಳಗಾಗಿದ್ದು, ಒಂದು ಹೊತ್ತಿನ ಊಟಕ್ಕೂ ಪರದಾಡುವಂತಹ ಸ್ಥಿತಿ ನಿರ್ಮಾಣಗೊಂಡಿದೆ.
ದೇಶಾದ್ಯಂತ ಲಾಕ್ಡೌನ್ ಸಂಕಷ್ಟ: ಹಸಿವಿನಿಂದಲೇ ಮೃತಪಟ್ಟರಾ 70ರ ವೃದ್ಧ!? - ಹಸಿವಿನಿಂದ ಸಾವನ್ನಪ್ಪಿದ್ರಾ 70ರ ವೃದ್ಧ
ಕೊರೊನಾ ವೈರಸ್ ವಿರುದ್ಧ ಹೋರಾಟ ಮುಂದುವರೆದಿದ್ದು, ಎಲ್ಲರೂ ಒಗ್ಗಟ್ಟಿನಿಂದ ಹೋರಾಟ ನಡೆಸಿದ್ದಾರೆ. ಇದರ ಮಧ್ಯೆ ಬಡವರು ಊಟದ ಸಮಸ್ಯೆಯಿಂದ ಬಳುಲುತ್ತಿದ್ದಾರೆ.
ಇದೀಗ ಊಟ ಸಿಗದ ಕಾರಣದಿಂದ ವೃದ್ಧನೊಬ್ಬ ಸಾವನ್ನಪ್ಪಿರುವ ಘಟನೆ ತಮಿಳುನಾಡಿನ ಮಧುರೈನಲ್ಲಿ ನಡೆದಿದೆ. ತಿರುಪುವನಂ ಬಳಿಯ ಸಕ್ಕುಡಿ ವಿಲ್ಲಾಕು ಬಳಿ 70 ವರ್ಷದ ವ್ಯಕ್ತಿಯ ಮೃತದೇಹ ಪತ್ತೆಯಾಗಿದ್ದರ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ.
ಪೊಲೀಸರು ಸ್ಥಳಕ್ಕೆ ಧಾವಿಸಿ ಶವ ವಶಪಡಿಸಿಕೊಂಡಿದ್ದು, ಅವರು ಹಸವಿನಿಂದ ಸಾವನ್ನಪ್ಪಿದ್ದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಇನ್ನು ಬಿಹಾರದ ಪಾಟ್ನಾದಲ್ಲೂ 8 ವರ್ಷದ ಬಾಲಕನೊಬ್ಬ ಸಾವನ್ನಪ್ಪಿರುವ ಘಟನೆ ನಡೆದಿದೆ. ಇನ್ನು ಜಾರ್ಖಂಡ್‌ನಲ್ಲಿ 40 ವರ್ಷದ ವ್ಯಕ್ತಿಯೊಬ್ಬ ಹಸಿವಿನಿಂದ ಮೃತಪಟ್ಟಿದ್ದಾರೆ ಎಂಬ ಮಾತು ಕೇಳಿ ಬಂದಿವೆ. ಇದರ ತನಿಖೆ ನಡೆಸುವಂತೆ ಮುಖ್ಯಮಂತ್ರಿ ಹೇಮಂತ್ ಸೊರೆನ್ ಆದೇಶ ನೀಡಿದ್ದಾರೆ.