ನವದೆಹಲಿ: ದೇಶದ ಪ್ರಜಾಪ್ರಭುತ್ವ ರಚನೆಯನ್ನು ಬಲಪಡಿಸಲು ಮತ್ತು ಚುನಾವಣೆಗಳನ್ನು ಸುಗಮವಾಗಿ ನಡೆಸಲು ಚುನಾವಣಾ ಆಯೋಗ ನೀಡಿದ ಅದ್ಭುತ ಕೊಡುಗೆಯನ್ನು ರಾಷ್ಟ್ರೀಯ ಮತದಾರರ ದಿನಾಚರಣೆಯಂದು ಪ್ರಶಂಸಿಸಬೇಕಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಹೇಳಿದ್ದಾರೆ.
"ರಾಷ್ಟ್ರೀಯ ಮತದಾರರ ದಿನವು ನಮ್ಮ ಪ್ರಜಾಪ್ರಭುತ್ವವನ್ನು ಬಲಪಡಿಸಲು ಮತ್ತು ಚುನಾವಣೆಗಳನ್ನು ಸುಗಮವಾಗಿ ನಡೆಸಲು ಚುನಾವಣಾ ಆಯೋಗ ನೀಡಿದ ಅದ್ಭುತ ಕೊಡುಗೆಯನ್ನು ಶ್ಲಾಘಿಸುವ ಸಂದರ್ಭವಾಗಿದೆ. ಮತದಾರರ ನೋಂದಣಿಯನ್ನು ಖಾತರಿಪಡಿಸುವ ಅಗತ್ಯತೆಯ ಬಗ್ಗೆ, ವಿಶೇಷವಾಗಿ ಯುವಕರಲ್ಲಿ ಜಾಗೃತಿ ಮೂಡಿಸುವ ದಿನ ಇದಾಗಿದೆ" ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ಈ ವರ್ಷದ ರಾಷ್ಟ್ರೀಯ ಮತದಾರರ ದಿನಾಚರಣೆಯ ವಿಷಯವೆಂದರೆ 'ನಮ್ಮ ಮತದಾರರನ್ನು ಸಬಲೀಕರಣಗೊಳಿಸುವುದು, ಜಾಗರೂಕತೆ, ಸುರಕ್ಷಿತ ಮಾಹಿತಿ ನೀಡುವುದು'. ಇದು ಚುನಾವಣೆಯ ಸಮಯದಲ್ಲಿ ಸಕ್ರಿಯ ಮತ್ತು ಭಾಗವಹಿಸುವ ಮತದಾರರನ್ನು ರೂಪಿಸುತ್ತದೆ. ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ಚುನಾವಣೆಗಳನ್ನು ಸುರಕ್ಷಿತವಾಗಿ ನಡೆಸುವ ಆಯೋಗದ ಬದ್ಧತೆಯ ಬಗ್ಗೆಯೂ ಇದು ಗಮನಹರಿಸುತ್ತದೆ.
ಓದಿ:ರಾಜ್ಯದ 19 ಪೊಲೀಸ್ ಅಧಿಕಾರಿಗಳಿಗೆ ಪ್ರಧಾನ ಮಂತ್ರಿ ಪ್ರಶಂಸನೀಯ ಸೇವಾ ಪದಕ
ರಾಷ್ಟ್ರೀಯ ಮತದಾರರ ದಿನವನ್ನು 2011 ರಿಂದ ಪ್ರತಿವರ್ಷ ಜನವರಿ 25 ರಂದು ಆಚರಿಸಲಾಗುತ್ತಿದೆ. ರಾಷ್ಟ್ರೀಯ ಮತದಾರರ ದಿನಾಚರಣೆಯ ಮುಖ್ಯ ಉದ್ದೇಶವೆಂದರೆ ಮತದಾರರಲ್ಲಿ ಜಾಗೃತಿ ಮೂಡಿಸುವುದು ಮತ್ತು ಚುನಾವಣಾ ಪ್ರಕ್ರಿಯೆಯ ಬಗ್ಗೆ ತಿಳುವಳಿಕೆ ಮೂಡಿಸುವುದಾಗಿದೆ.