ಕರ್ನಾಟಕ

karnataka

ETV Bharat / bharat

ದೇಶದಲ್ಲಿ ಬಹುದೊಡ್ಡ ಹಕ್ಕು ಮತದಾನದ ಹಕ್ಕು, ಇದನ್ನು ಪ್ರತಿಯೊಬ್ಬರು ಬಳಸಿಕೊಳ್ಳಬೇಕಿದೆ: ರಾಷ್ಟ್ರಪತಿ ಕೋವಿಂದ್ - .NEWDELHI

ನಮ್ಮ ಸಂವಿಧಾನವೇ ನೀಡಿರುವ ಈ ಮತದಾನದ ಹಕ್ಕನ್ನು ದೇಶದಲ್ಲಿ ಸರಿಯಾದ ರೀತಿಯಲ್ಲಿ ಬಳಕೆ ಮಾಡಿಕೊಳ್ಳದೇ ಇರುವುದು ವಿಷಾದದ ಸಂಗತಿಯೆಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಬೇಸರ ವ್ಯಕ್ತಪಡಿಸಿದರು.

President Kovind
President Kovind

By

Published : Jan 25, 2020, 8:36 PM IST

ನವದೆಹಲಿ: ಕೆಲವು ದೇಶಗಳಲ್ಲಿ ಮತದಾನದ ಹಕ್ಕನ್ನು ಪಡೆಯಲು ಸಾವಿರಾರು ವರ್ಷಗಳ ಹೋರಾಟ ನಡೆಸಿದ್ದಾರೆ. ಅಂತಂಹದರಲ್ಲಿ ನಮ್ಮ ಸಂವಿಧಾನವೇ ನೀಡಿರುವ ಈ ಮತದಾನದ ಹಕ್ಕನ್ನು ದೇಶದಲ್ಲಿ ಸರಿಯಾದ ರೀತಿಯಲ್ಲಿ ಬಳಕೆ ಮಾಡಿಕೊಳ್ಳದೇ ಇರುವುದು ವಿಷಾದದ ಸಂಗತಿಯೆಂದು ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಬೇಸರ ವ್ಯಕ್ತಪಡಿಸಿದರು.

ರಾಷ್ಟ್ರೀಯ ಮತದಾರರ ದಿನದ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮೊದಲ ಸಾರ್ವತ್ರಿಕ ಚುನಾವಣೆಯಿಂದ ಕಳೆದ ವರ್ಷ ನಡೆದ 17ನೇ ಲೋಕಸಭಾ ಚುನಾವಣೆಯವರೆಗೆ, ವಿಶ್ವದಾದ್ಯಂತ ಭಾರತೀಯ ಮತದಾರರು ಪ್ರಜಾಪ್ರಭುತ್ವದ ವಿಶ್ವಾಸಾರ್ಹತೆಯನ್ನು ಹೆಚ್ಚಿಸಿದ್ದಾರೆ. ಇದಕ್ಕಾಗಿ ನಾನು ದೇಶದ ಎಲ್ಲ ಮತದಾರರನ್ನು ಅಭಿನಂದಿಸುತ್ತೇನೆ.

ಆದರೆ ಇಂದಿಗೂ ದೇಶದ ಕೆಲವು ಮತದಾರರು ತಮ್ಮ ಮತದಾನದ ಹಕ್ಕಿನ ಮಹತ್ವವನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ. ವಿಶ್ವದಲ್ಲಿರುವ ಎಷ್ಟೋ ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ ಸಾಮಾನ್ಯ ಜನರು ಮತದಾನದ ಹಕ್ಕುಪಡೆಯಲು ನಿರಂತರ ಹೋರಾಟಗಳ ಜೊತೆಗೆ ಅನೇಕ ತ್ಯಾಗಗಳನ್ನು ಮಾಡಬೇಕಾಗಿತ್ತು. ಸುಮಾರು ಮೂರು ದಶಕಗಳ ಹೋರಾಟದ ನಂತರ, ಇಂಗ್ಲೆಂಡ್‌ನಂತಹ ಹಳೆಯ ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿಯೂ ಸಹ, 20 ನೇ ಶತಮಾನದಲ್ಲಿ ಮಹಿಳೆಯರು ಸಮಾಜದಲ್ಲಿ ತಮ್ಮ ಸಮಾನ ಮತದಾನದ ಹಕ್ಕುಗಳನ್ನು ಪಡೆಯಲು ಸಾಧ್ಯವಾಯಿತು ಎಂದರು. ಭಾರತೀಯ ಸಂವಿಧಾನದವೂ ಯಾವುದೇ ಚೌಕಟ್ಟುಗಳು, ಯಾವುದೇ ತಾರತಮ್ಯವಿಲ್ಲದೆ ಎಲ್ಲಾ ವಯಸ್ಕ ಭಾರತೀಯರಿಗೆ ಅಮೂಲ್ಯ ಮತದಾನದ ಹಕ್ಕನ್ನು ನೀಡಿದೆ ಎಂದು ರಾಷ್ಟ್ರಪತಿ ಹೇಳಿದರು.

ಸ್ವಾತಂತ್ರ್ಯದ ನಂತರ, ಭಾರತವು ಎಲ್ಲಾ ನಾಗರಿಕರಿಗೆ ವಯಸ್ಕರ ಮತದಾನವನ್ನು ನೀಡಿದಕ್ಕೆ ಸಾಕಷ್ಟು ಟೀಕೆಗಳಿಗೆ ಒಳಗಾದರು, ಏಕೆಂದರೆ ಮತದಾನದ ಹಕ್ಕು ಕೇವಲ ಅಭಿವೃದ್ಧಿ ಹೊಂದಿದ ಮತ್ತು ಸಮೃದ್ಧ ರಾಷ್ಟ್ರಗಳಿಗೆ ಸೀಮಿತವಾಗಿತ್ತು. ಆದರೆ ವಿಶ್ವದ ಇತಿಹಾಸದಲ್ಲಿ ನಮ್ಮ ದೇಶದ ಮತದಾರರು ಇಂದು ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಅತಿದೊಡ್ಡ ಯಶಸ್ವಿ ಪ್ರಯೋಗವೆಂದು ಸಾಬೀತುಪಡಿಸಿದರು ಎಂದು ಮತದಾನದ ಹಕ್ಕಿನ ಮಹತ್ವವನ್ನು ರಾಷ್ಟ್ರಪತಿ ಸಾರಿದರು.

ABOUT THE AUTHOR

...view details