ಗುಜರಾತ್ :ಕೆವಾಡಿಯಾದಲ್ಲಿ ಅಖಿಲ ಭಾರತ ಸಭಾಧ್ಯಕ್ಷರ (ಸ್ಪೀಕರ್) ಸಮಾವೇಶಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಚಾಲನೆ ನೀಡಿದ್ದಾರೆ. ಕಾರ್ಯಕ್ರಮದಲ್ಲಿ ಎಲ್ಲ ರಾಜ್ಯಗಳ ಸ್ಪೀಕರ್, ಲೋಕಸಭಾ ಮತ್ತು ರಾಜ್ಯಸಭೆಯ ಅಧಿಕಾರಿಗಳು ಭಾಗಿಯಾಗಿದ್ದಾರೆ. ಮೇಲ್ಮನೆ ಮತ್ತು ಕೆಳ ಮನೆಯ ಪ್ರತಿಪಕ್ಷದ ನಾಯಕರನ್ನು ಸಹ ಸಮ್ಮೇಳನಕ್ಕೆ ಆಹ್ವಾನಿಸಲಾಗಿದೆ.
ಸಮ್ಮೇಳನದಲ್ಲಿ ದೇಶದ ರಕ್ಷಣೆ ಮತ್ತು ಸುರಕ್ಷತೆ, ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ಸಂಬಂಧಿಸಿದ ವಿಷಯಗಳನ್ನು ಚರ್ಚಿಸಲಾಗುತ್ತಿದೆ.
ಇದನ್ನೂ ಓದಿ: ಓವೈಸಿ ರಕ್ಷಿಸುತ್ತಿರುವ ಪ್ರತಿಯೊಬ್ಬ ರೋಹಿಂಗ್ಯಾನನ್ನು ಹೊರಹಾಕುತ್ತೇವೆ: ತೇಜಸ್ವಿ ಸೂರ್ಯ
ಪ್ರಧಾನಿ ನರೇಂದ್ರ ಮೋದಿಯವರು ನವೆಂಬರ್ 26 ರಂದು 80 ನೇ ಅಖಿಲ ಭಾರತ ಸಭಾಧ್ಯಕ್ಷರ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಲಿದ್ದಾರೆ.
2 ಸಾವಿರ ಸೈನಿಕರಿಂದ ಭದ್ರತೆ
ನರ್ಮದಾ ಜಿಲ್ಲೆ ಸಮ್ಮೇಳನದ ಉಸ್ತುವಾರಿ ವಹಿಸಿಕೊಂಡಿದ್ದು, ಭದ್ರತೆಗಾಗಿ 2 ಸಾವಿರ ಯೋಧರನ್ನು ನಿಯೋಜಿಸಲಾಗಿದೆ. ಜಿಲ್ಲಾಧಿಕಾರಿ ಡಿ.ಎ. ಶಾ ನೇತೃತ್ವದಲ್ಲಿ 37 ಸಮಿತಿಗಳನ್ನು ರಚಿಸಿ 500 ಕ್ಕೂ ಹೆಚ್ಚು ಆಡಳಿತಾಧಿಕಾರಿಗಳು ಮತ್ತು ಸರ್ಕಾರಿ ನೌಕರರನ್ನು ವಿವಿಧ ಪ್ರವಾಸೋದ್ಯಮ ಸ್ಥಳಗಳಲ್ಲಿ ನಿಯೋಜಿಸಲಾಗಿದೆ.
ಅಶ್ವತ್ಥಮರ ವೀಕ್ಷಣೆ ಸಾಧ್ಯತೆ
2018 ರ ಡಿಸೆಂಬರ್ 15 ರಂದು ಏಕತಾ ಪ್ರತಿಮೆ ಪಕ್ಕದ ಹೂವಿನ ಕಣಿವೆ ಬಳಿ ನೆಟ್ಟಿದ್ದ ಅಶ್ವತ್ಥಮರಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಭೇಟಿ ನೀಡುವ ಸಾಧ್ಯತೆಯಿದೆ. ರಾಷ್ಟ್ರಪತಿ ನೆಟ್ಟಿದ್ದ ಈ ಗಿಡವನ್ನು ಅರಣ್ಯ ಇಲಾಖೆ ವಿಶೇಷ ಕಾಳಜಿ ವಹಿಸಿ, ಪೋಷಿಸಿದೆ.
ಹೆಚ್ಚುತ್ತಿರುವ ಕೋವಿಡ್
ಭರೂಚ್ ಮತ್ತು ನರ್ಮದಾ ಜಿಲ್ಲೆಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿವೆ. ದೀಪಾವಳಿ ಸಮಯದಲ್ಲಿ ಸಾರ್ವಜನಿಕರ ನಿರ್ಲಕ್ಷ್ಯದಿಂದ ವೈರಸ್ ಮತ್ತಷ್ಟು ವ್ಯಾಪಿಸಿದೆ. ಹಾಗಾಗಿ ಸಮಾರಂಭದಲ್ಲಿ ಹೆಚ್ಚಿನ ಜನರ ಭಾಗವಹಿಸುವಿಕೆಗೆ ಅನುಮತಿ ನೀಡಿಲ್ಲ. ಜತೆಗೆ ಸೋಂಕು ಹರಡದಂತೆ ಈಗಾಗಲೇ ಸರ್ಕಾರ ಹಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ.