ನವದೆಹಲಿ: ವಾಹನ ಸವಾರರ ವಿರುದ್ಧ ಕ್ರಮ ಕೈಗೊಳ್ಳುವ ಅಧಿಕಾರವನ್ನು ಕೇಂದ್ರ ಸರ್ಕಾರವು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೂ ವಿಸ್ತರಿಸಿದ್ದು, ಇನ್ನು ಮುಂದೆ ವಾಹನ ಸವಾರರಿಗೆ ಈ ಇಲಾಖೆಯೂ ದಂಡ ವಿಧಿಸಬಹುದಾಗಿದೆ.
ಶಾಕ್ ಮೇಲೆ ಶಾಕ್... ಹೆದ್ದಾರಿಯಲ್ಲಿ ಪಾರ್ಕ್ ಮಾಡಿದ್ರೆ ನಿಮ್ಮ ವಾಹನ ಹರಾಜು!
ರಾಷ್ಟ್ರೀಯ ಹೆದ್ದಾರಿಯಲ್ಲಿ ಅಕ್ರಮವಾಗಿ ಪಾರ್ಕ್ ಮಾಡುವ ವಾಹನಗಳ ಮೇಲೆ ಕೇಂದ್ರ ಸರ್ಕಾರವು ಕಣ್ಣಿಟ್ಟಿದೆ. ಹೆದ್ದಾರಿ ಪ್ರಾಧಿಕಾರವು ಈ ರೀತಿ ಅಕ್ರಮವಾಗಿ ಪಾರ್ಕ್ ಮಾಡಿರುವ ವಾಹನಗಳಿಗೆ ದಂಡ ವಿಧಿಸಲು ತೀರ್ಮಾನಿಸಿದೆ. ಒಂದು ವಾರದ ಒಳಗೆ ದಂಡ ಪಾವತಿ ಮಾಡದಿದ್ದರೆ ಆ ವಾಹನಗಳನ್ನು ಹರಾಜು ಹಾಕಲು ನಿರ್ಧರಿಸಲಾಗಿದೆ.
national highway
ಈವರೆಗೆ ವಾಹನ ಸವಾರರ ವಿರುದ್ಧ ಕ್ರಮ ಕೈಗೊಳ್ಳುವ ಯಾವುದೇ ಅಧಿಕಾರವನ್ನು ಕೇಂದ್ರ ಸಾರಿಗೆ ಇಲಾಖೆಯು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಹೆಚ್ಚುವರಿ ಅಧಿಕಾರವನ್ನು ನೀಡಿದೆ.
ಮೂಲಗಳ ಪ್ರಕಾರ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಕ್ರಮವಾಗಿ ಪಾರ್ಕ್ ಮಾಡುವ ವಾಹನಗಳ ಮೇಲೆ ಕೇಂದ್ರ ಸರ್ಕಾರವು ಕಣ್ಣಿಟ್ಟಿದೆ. ಹೆದ್ದಾರಿ ಪ್ರಾಧಿಕಾರವು ಈ ರೀತಿ ಅಕ್ರಮವಾಗಿ ಪಾರ್ಕ್ ಮಾಡಿರುವ ವಾಹನಗಳಿಗೆ ದಂಡ ವಿಧಿಸಲು ತೀರ್ಮಾನಿಸಿದೆ. ಒಂದು ವಾರದ ಒಳಗೆ ದಂಡ ಪಾವತಿ ಮಾಡದಿದ್ದರೆ ಆ ವಾಹನಗಳನ್ನು ಹರಾಜು ಹಾಕಲು ನಿರ್ಧರಿಸಲಾಗಿದೆ.