ನಾರ್ಮನ್ ಶಮ್‌ವೇ ಅವರನ್ನು ಹೃದಯ ಕಸಿ ಮಾಡುವಿಕೆಯ ಪಿತಾಮಹ ಎಂದು ವ್ಯಾಪಕವಾಗಿ ಪರಿಗಣಿಸಲಾಗಿದ್ದರೂ, ವಿಶ್ವದ ಮೊದಲ ವಯಸ್ಕ ಮಾನವ ಹೃದಯ ಕಸಿಯನ್ನು ಕ್ರಿಸ್ಟಿಯನ್ ಬರ್ನಾರ್ಡ್ ಅವರು ಡಿಸೆಂಬರ್ 3, 1967 ರಂದು ದಕ್ಷಿಣ ಆಫ್ರಿಕದ ಕೇಪ್ ಟೌನ್‌ನ ಗ್ರೂಟ್ ಶುಯರ್ ಆಸ್ಪತ್ರೆಯಲ್ಲಿ ನಡೆಸಿದರು. ಆಡ್ರಿಯನ್ ಕಾಂಟ್ರೊವಿಟ್ಜ್ ಅವರು ಡಿಸೆಂಬರ್ 6, 1967 ರಂದು ವಿಶ್ವದ ಮೊದಲ ಮಕ್ಕಳ ಹೃದಯ ಕಸಿಯನ್ನು ಮಾಡಿದರು ಮತ್ತು ನಾರ್ಮನ್ ಶಮ್‌ವೇ ಯುನೈಟೆಡ್ ಸ್ಟೇಟ್ಸ್ ನಲ್ಲಿ ಜನವರಿ 6, 1968 ರಂದು ಸ್ಟ್ಯಾನ್ಫೋರ್ಡ್ ಯೂನಿವರ್ಸಿಟಿ ಆಸ್ಪತ್ರೆಯಲ್ಲಿ ಮೊದಲ ವಯಸ್ಕ ಹೃದಯ ಕಸಿಯನ್ನು ಮಾಡಿದರು.
ಅಮೆರಿಕದ ಶಸ್ತ್ರಚಿಕಿತ್ಸಕ ನಾರ್ಮನ್ ಶಮ್‌ವೇ 1958 ರಲ್ಲಿ ಕ್ಯಾಲಿಫೋರ್ನಿಯಾದ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದಲ್ಲಿ ನಾಯಿಯೊಂದಕ್ಕೆ ಮೊದಲ ಯಶಸ್ವಿ ಹೃದಯ ಕಸಿಯನ್ನು ಯಶಸ್ವಿಯಾಗಿ ಮಾಡಿದರು.
ಭಾರತದಲ್ಲಿ, ಕ್ರಿಸ್ಟಿಯನ್ ಬರ್ನಾರ್ಡ್ ನಂತರ ಪಿ ಕೆ ಸೇನ್ ಮಾನವರಲ್ಲಿ ಮೊದಲ ಹೃದಯ ಕಸಿಗೆ ಪ್ರಯತ್ನಿಸಿದರು. ಆದರೆ ನಂತರದಲ್ಲಿ ರೋಗಿಗಳು ಸಾವನ್ನಪ್ಪಿದರು. ಭಾರತದಲ್ಲಿ ಡಾ. ಪಿ. ವೇಣುಗೋಪಾಲ್ ಮೊದಲ ಯಶಸ್ವಿ ಹೃದಯ ಕಸಿಯನ್ನು 1994 ರಲ್ಲಿ ನವದೆಹಲಿಯ ಏಮ್ಸ್ನಲ್ಲಿ ನಡೆಸಿದರು.