ರಾಷ್ಟ್ರೀಯ ನೇತ್ರದಾನ ಆಚರಣೆಯನ್ನು ಪ್ರತಿ ವರ್ಷ ಆಗಸ್ಟ್ 25ರಿಂದ ಸೆಪ್ಟೆಂಬರ್ 8ರವರೆಗೆ ಆಚರಿಸಲಾಗುತ್ತದೆ. ಸಾರ್ವಜನಿಕರಲ್ಲಿ ನೇತ್ರದಾನದ ಬಗ್ಗೆ ಜಾಗೃತಿ ಮೂಡಿಸುವುದು ಹಾಗೂ ಜನರು ತಮ್ಮ ನೇತ್ರ ಸೇರಿದಂತೆ ಅಂಗಾಂಗವನ್ನು ದಾನ ಮಾಡಲು ಪ್ರೇರೆಪಣೆ ನೀಡುವುದು ಈ ಆಚರಣೆಯ ಉದ್ದೇಶವಾಗಿದೆ.
ರಾಷ್ಟ್ರೀಯ ನೇತ್ರದಾನ ದಿನವನ್ನು ಆಗಸ್ಟ್ 25 ರಿಂದ ಸೆಪ್ಟೆಂಬರ್ 8 ರವರೆಗೆ ಭಾರತದಲ್ಲಿ ಆಚರಿಸಲಾಗುತ್ತದೆ. ರಾಷ್ಟ್ರೀಯ ನೇತ್ರದಾನ ಫೋರ್ಟ್ನೈಟ್ನನ್ನು 1985ರಲ್ಲಿ ಪ್ರಾರಂಭಿಸಲಾಯಿತು. ಭಾರತದಲ್ಲಿ ಕಣ್ಣಿನ ದಾನದ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಜನರನ್ನು ದಾನಕ್ಕೆ ಪ್ರೋತ್ಸಾಹಿಸುವುದು ಇದರ ಉದ್ದೇಶವಾಗಿದೆ.
ಕುರುಡುತನಕ್ಕೆ ಕಾರಣಗಳು ಹಲವಾರು. ಕಣ್ಣಿನ ಪೊರೆ(ಕ್ಯಾಟರ‍್ಯಾಕ್ಟ್), ಕಣ್ಣಿನ ಒಳಭಾಗದಲ್ಲಿ ಏರಿದ ಒತ್ತಡ (ಗ್ಲೂಕೋಮ), ಕಣ್ಣಿನ ಒಳಪರದೆ (ರೆಟಿನಾ)ಯಲ್ಲಿನ ದೋಷ ಹಾಗೂ ಕಣ್ಣಿನ ಮುಂಭಾಗಲ್ಲಿರುವ ಪಾರದರ್ಶಕ ಪಟಲದಲ್ಲಿನ (ಕಾರ್ನಿಯ) ದೋಷ - ಇವೇ ಮುಂತಾದುವು ಕುರುಡುತನಕ್ಕೆ ಮುಖ್ಯ ಕಾರಣಗಳು.
ಹದಿನೈದು ದಿನಗಳ ರಾಷ್ಟ್ರೀಯ ನೇತ್ರದಾನದ ಗುರಿ ಏನು:
- 1. ಮರಣದ ನಂತರ ಜನರು ತಮ್ಮ ಕಣ್ಣುಗಳನ್ನು ದಾನ ಮಾಡುವಂತೆ ಅವರನ್ನು ಪ್ರೋತ್ಸಾಹಿಸುವುದು.
- 2.ಮರಣದ ನಂತರ ಕಣ್ಣನ್ನು ದಾನ ಮಾಡುವುದರಿಂದ ಯಾವುದೇ ಹಾನಿ ಆಗುವುದಿಲ್ಲ ಎಂದು ಜನರಿಗೆ ತಿಳಿ ಹೇಳುವುದು.
- 3. ಕಣ್ಣಿನ ಕಸಿ ಮಾಡುವ ಅಗತ್ಯತೆಯ ಬಗ್ಗೆ ಜನರಿಗೆ ಮಾಹಿತಿ ನೀಡುವುದು.
ನೇತ್ರದಾನವನ್ನು ಹೇಗೆ ಮಾಡುವುದು:
ವ್ಯಕ್ತಿ ಮರಣ ಹೊಂದಿದ 4 ರಿಂದ 6 ಗಂಟೆಗಳ ಒಳಗೆ ಕಣ್ಣುಗಳನ್ನು ದಾನ ಮಾಡಬಹುದಾಗಿದೆ. ವ್ಯಕ್ತಿಯ ಕಣ್ಣುಗಳನ್ನು ನೋಂದಾಯಿತ ವೈದ್ಯಕೀಯ ವೈದ್ಯರು ಮಾತ್ರ ತೆಗೆಯಬಹುದಾಗಿದೆ.
ವ್ಯಕ್ತಿಯ ಕಣ್ಣುಗಳನ್ನು ತೆಗೆಯಲು ಕಣ್ಣಿನ ಬ್ಯಾಂಕ್ ತಂಡ ಸತ್ತವರ ಮನೆಗೆ ಅಥವಾ ಆಸ್ಪತ್ರೆಗೆ ಭೇಟಿ ನೀಡಬೇಕಾಗುತ್ತದೆ.
ಕಣ್ಣುಗಳನ್ನು ತೆಗೆಯುವ ಪ್ರಕ್ರಿಯೆಯೂ ಅಂತ್ಯಕ್ರಿಯೆಗೆ ವಿಳಂಬ ಮಾಡುವುದಿಲ್ಲ. ಏಕೆಂದರೆ ಇಡೀ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸುಮಾರು 20 ರಿಂದ 30 ನಿಮಿಷಗಳು ಸಾಕಗುತ್ತದೆ.
ವ್ಯಕ್ತಿ ಯಾವುದೇ ರೀತಿಯ ಸಾಂಕ್ರಾಮಿಕ ರೋಗಗಳನ್ನು ಹೊಂದಿದ್ದಾನೋ ಅಥವಾ ಇಲ್ಲವೋ ಎಂಬುದನ್ನು ಖಚಿತಪಡಿಸಿಕೊಳ್ಳಲು ರಕ್ತದ ಮಾದರಿಯನ್ನು ತೆಗೆದುಕೊಳ್ಳಬೇಕಾಗುತ್ತದೆ. ಅಲ್ಲದೇ ದಾನಿ ಮತ್ತು ಕಣ್ಣುಗಳನ್ನು ಹಾಕುವ ವ್ಯಕ್ತಿಯ ಮಾಹಿತಿಯನ್ನು ಗೌಪ್ಯವಾಗಿಡಲಾಗುತ್ತದೆ.