ಗುರುಗ್ರಾಮ: ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ 40 ವೀರಯೋಧರಿಗೆ ನಮನ ಸಲ್ಲಿಸಿದ ಬಳಿಕ, ಈ ಯೋಧರ ಬಲಿದಾನವನ್ನು ದೇಶ ಎಂದಿಗೂ ಮರೆಯುವುದಿಲ್ಲ ಎಂದು ಭದ್ರತಾ ಸಲಹೆಗಾರ ಅಜಿತ್ ಧೋವಲ್ ಹೇಳಿದ್ದಾರೆ.
ಸಿಆರ್ಪಿಎಫ್ನ 80 ವರ್ಷಾಚರಣೆಯಲ್ಲಿ ಪಾಲ್ಗೊಂಡ ಅಜಿತ್ ಧೋವಲ್, ಪುಲ್ವಾಮಾದಲ್ಲಿನ ಯೋಧರ ಬಲಿದಾನ ಅತ್ಯಂತ ಪ್ರಮುಖವಾಗಿದ್ದು ಇದನ್ನು ಭಾರತ ದೇಶ ಹಾಗೂ ಭಾರತೀಯರು ಯಾವತ್ತೂ ಮರೆಯುವುದಿಲ್ಲ ಎಂದಿದ್ದಾರೆ.
ಪುಲ್ವಾಮಾ ದಾಳಿಗೆ ಪ್ರತೀಕಾರ ಇನ್ನೂ ಮುಗಿದಿಲ್ಲ. ಉಗ್ರರು ಸಂಪೂರ್ಣ ನಿರ್ನಾಮವಾಗುವವರೆಗೆ ಸರ್ಜಿಕಲ್ ಸ್ಟ್ರೈಕ್ಗಳು ಮುಂದುವರಿಯಲಿವೆ ಎಂದೂ ಧೋವಲ್ ಹೇಳಿದರು.
ಯಾವ ಸಂದರ್ಭದಲ್ಲಿ ಯಾವ ರೀತಿಯ ಪ್ರತ್ಯುತ್ತರ ನೀಡಬೇಕು ಎನ್ನುವ ನಿರ್ಧಾರವನ್ನು ಕೈಗೊಳ್ಳುವ ಸಾಮರ್ಥ್ಯ ನಮ್ಮ ನಾಯಕರಿಗಿದೆ ಎಂದು ಇದೇ ವೇಳೆ ಧೋವಲ್ ಹೇಳಿದ್ದಾರೆ.
ಪುಲ್ವಾಮಾ ದಾಳಿ ಹಿನ್ನೆಲೆ ಪರೇಡ್ ಬಳಿಕ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿಲ್ಲ.