ನವದೆಹಲಿ:ಗಾಲ್ವನ್‌ನಲ್ಲಿ ಭಾರತೀಯ ಸೇನೆಯ 20 ಯೋಧರು ಹುತಾತ್ಮರಾಗಿರವುದು ಅತ್ಯಂತ ನೋವಿನ ಸಂಗತಿ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕಂಬನಿ ಮಿಡಿದಿದ್ದಾರೆ.
ಸೈನಿಕರ ಧೈರ್ಯ, ಬಲಿದಾನವನ್ನು ದೇಶ ಎಂದಿಗೂ ಮರೆಯುವುದಿಲ್ಲ: ರಾಜನಾಥ್ ಸಿಂಗ್ - ರಕ್ಷಣಾ ಸಚಿವ
ಪೂರ್ವ ಲಡಾಕ್‌ನ ಗಾಲ್ವನ್‌ನಲ್ಲಿ ಚೀನಾ ಯೋಧರೊಂದಿಗೆ ಹೋರಾಡಿ ಮಡಿದ ಯೋಧರ ಧೈರ್ಯ ಮತ್ತು ಬಲಿದಾನವನ್ನು ದೇಶ ಎಂದಿಗೂ ಮರೆಯುವುದಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ.
ಸೈನಿಕರ ಧೈರ್ಯ ಮತ್ತು ಬಲಿದಾನವನ್ನು ದೇಶ ಎಂದಿಗೂ ಮರೆಯುವುದಿಲ್ಲ; ರಾಜನಾಥ್ ಸಿಂಗ್
ಪೂರ್ವ ಲಡಾಖ್‌ನಲ್ಲಿ ಭಾರತ-ಚೀನಾ ಸೈನಿಕರ ಘರ್ಷಣೆಯಲ್ಲಿ ಯೋಧರು ಮೃತಪಟ್ಟಿರುವ ಬಗ್ಗೆ ಟ್ವೀಟ್ ಮಾಡಿರುವ ಅವರು, ಸೈನಿಕರ ಧೈರ್ಯ ಮತ್ತು ಬಲಿದಾನವನ್ನು ದೇಶ ಎಂದಿಗೂ ಮರೆಯುವುದಿಲ್ಲ ಎಂದಿದ್ದಾರೆ.
ಇಂತಹ ಕಠಿಣ ಸಂದರ್ಭದಲ್ಲಿ ದೇಶ ಸೈನಿಕರ ಕುಟುಂಬದವರಿಗೆ ಬೆನ್ನೆಲುಬಾಗಿ ನಿಲ್ಲಲಿದೆ. ಯೋಧರ ಧೈರ್ಯ ಮತ್ತು ಧೈರ್ಯಶಾಲಿ ಹೃದಯಗಳನ್ನು ಪ್ರೋತ್ಸಾಹಿಸಿದವರ ಬಗ್ಗೆ ನಮಗೆ ಹೆಮ್ಮೆಯಿದೆ ಎಂದು ಗೃಹ ಸಚಿವರು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.