ಕರ್ನಾಟಕ

karnataka

ETV Bharat / bharat

20 ಲಕ್ಷ ಕೋಟಿ ರೂ ಮೌಲ್ಯದ ಬೃಹತ್‌ ಆರ್ಥಿಕ ಪ್ಯಾಕೇಜ್‌: ಸಂಜೆ 4 ಕ್ಕೆ ವಿತ್ತ ಸಚಿವೆ ವಿವರಣೆ - Finance Minister

Finance Minister
ನಿರ್ಮಲಾ ಸೀತಾರಾಮನ್

By

Published : May 13, 2020, 10:31 AM IST

Updated : May 13, 2020, 10:56 AM IST

10:26 May 13

20 ಲಕ್ಷ ಕೋಟಿ ರೂ. ಆರ್ಥಿಕ ಪ್ಯಾಕೇಜ್ ಬಗ್ಗೆ ವಿವರಣೆ ನೀಡಲಿದ್ದಾರೆ ವಿತ್ತ ಸಚಿವೆ

ನವದೆಹಲಿ:ಕೊರೊನಾ ಬಿಕ್ಕಟ್ಟಿನ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ದೇಶವನ್ನು ಉದ್ದೇಶಿಸಿ 20 ಲಕ್ಷ ಕೋಟಿ ರೂ.ಗಳ ಬೃಹತ್ ಆರ್ಥಿಕ ಪ್ಯಾಕೇಜ್ ಅನ್ನು ನಿನ್ನೆ ಘೋಷಿಸಿದ್ದರು. ಇಂದು ಸಂಜೆ 4 ಗಂಟೆಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಯಾವೆಲ್ಲಾ ಕ್ಷೇತ್ರಗಳಿಗೆ ಎಷ್ಟು ಮೊತ್ತ ಮತ್ತು ಅದನ್ನು ಹೇಗೆ ಬಳಸುತ್ತಾರೆ ಎಂಬ ಬಗ್ಗೆ ವಿವರಗಳನ್ನು ನೀಡುತ್ತಾರೆ.

ಈ ಆರ್ಥಿಕ ಪ್ಯಾಕೇಜ್ ಭಾರತದ ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ)ಯ ಶೇ 10 ರಷ್ಟಿದೆ. ಇದು ದೇಶದ ವಿವಿಧ ಸ್ತರದ ಆರ್ಥಿಕ ವ್ಯವಸ್ಥೆಗೆ ಸಂಬಂಧಿಸಿದ ವಿಭಾಗಗಳಿಗೆ ಬೆಂಬಲದೊಂದಿಗೆ ಶಕ್ತಿ ತುಂಬಲಿದೆ.  

ಬಡವರು, ಕಾರ್ಮಿಕರು, ವಲಸೆ ಕಾರ್ಮಿಕರು, ಜಾನುವಾರು ಸಾಕುವವರು, ಮೀನುಗಾರರು, ಸಂಘಟಿತ ಅಥವಾ ಅಸಂಘಟಿತ ವಲಯ ಸೇರಿದಂತೆ ಪ್ರತಿ ವಲಯಕ್ಕೂ ಈ ಪ್ಯಾಕೇಜ್‌ನಲ್ಲಿ ಪ್ರಮುಖ ನಿರ್ಧಾರಗಳನ್ನು ಪ್ರಕಟಿಸಲಾಗುವುದು ಎಂದು ಪ್ರಧಾನಿ ಹೇಳಿದ್ದರು.

Last Updated : May 13, 2020, 10:56 AM IST

ABOUT THE AUTHOR

...view details