ನಾಸಿಕ್ (ಮಹಾರಾಷ್ಟ್ರ):ಕೊರೊನಾ ಬಗ್ಗೆ ಸಾಮಾನ್ಯ ಜನ ಓದಿ, ನೋಡಿ ತಿಳಿದುಕೊಂಡ್ರೆ, ಅಂಧರಿಗೆ ಇದು ಅಸಾಧ್ಯ. ಈ ನಿಟ್ಟಿನಲ್ಲಿ ನಾಸಿಕ್ ನಗರದ ಸಂಸ್ಥೆಯೊಂದು ಅಂಧರ ಅನುಕೂಲಕ್ಕಾಗಿ ಬ್ರೈಲ್ ಕೊರೊನಾ ಕರಪತ್ರವನ್ನು ಸಿದ್ಧಪಡಿಸಿದೆ.
ಜಗತ್ತನ್ನೇ ತಲ್ಲಣಗೊಳಿಸಿದ ಕೊರೊನಾ ಬಗ್ಗೆ ಪತ್ರಿಕೆಗಳು, ಮಾಧ್ಯಮಗಳು, ಸುದ್ದಿ ಪೋರ್ಟಲ್‌ಗಳು ಸುದ್ದಿ ಬಿತ್ತರಿಸುತ್ತಿವೆ. ಇದರಿಂದಾಗಿ ಸಾಮಾನ್ಯ ಜನರು ಕೊರೊನಾ ಬಗ್ಗೆ ಜಾಗೃತಗೊಳ್ಳುತ್ತಾರೆ. ಆದರೆ, ದೃಷ್ಠಿಹೀನರು ಓದಲು ಸಾಧ್ಯವಾಗದ ಹಿನ್ನೆಲೆ, ನಾಸಿಕ್ನಲ್ಲಿರುವ ಬ್ಲೈಂಡ್ ವೆಲ್ಫೇರ್ ಆರ್ಗನೈಸೇಶನ್ ಇಂಡಿಯಾ, ದೃಷ್ಟಿಹೀನ ಮಕ್ಕಳಿಗಾಗಿ ಬ್ರೈಲ್ ಕೊರೊನಾ ಕರಪತ್ರವನ್ನು ಸಿದ್ಧಪಡಿಸಿ ಜಾಗೃತಿ ಮೂಡಿಸುತ್ತಿದೆ.