ನವದೆಹಲಿ: ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಆಕಾಶದಿಂದ ನೋಡುವಾಗ ಹಿಮದಿಂದ ಆವೃತವಾದ ಹಿಮಾಲಯನ್ ಶಿಖರಗಳ ಅದ್ಭುತ ನೋಟದ ಫೋಟೋವನ್ನು ಹಂಚಿಕೊಂಡಿದೆ.
Photo: ಬಾಹ್ಯಾಕಾಶದಿಂದ ಹಿಮಾಲಯ ಪರ್ವತ ಶ್ರೇಣಿ ಸೆರೆ ಹಿಡಿದ ನಾಸಾ - ಬಾಹ್ಯಾಕಾಶದಿಂದ ಹಿಮಾಲಯ ಪರ್ವತ ಶ್ರೇಣಿ ಸೆರೆ ಹಿಡಿದ ನಾಸಾ
ಬಾಹ್ಯಾಕಾಶದಿಂದ ಸೆರೆ ಹಿಡಿದಿರುವ ಹಿಮಾಲಯ ಪರ್ವತ ಶ್ರೇಣಿಯ ಫೋಟೊ ಒಂದನ್ನು ನಾಸಾ ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಈ ಫೋಟೋದಲ್ಲಿ, ವಿಶ್ವದ ಅತಿ ಎತ್ತರದ ಹಿಮಾಲಯ ಪರ್ವತ ಶ್ರೇಣಿ ಹಿಮದಿಂದ ಆವರಿಸಿದ್ದನ್ನು ಕಾಣಬಹುದು. ಜೊತೆಗೆ, ಫೋಟೋದಲ್ಲಿ ಎರಡು ಕಡೆ ಬೆಳಕು ಕಾಣುತ್ತಿದ್ದು, ಅದು ಭಾರತ, ಪಾಕಿಸ್ತಾನದ ಎರಡು ನಗರಗಳು ಎಂದು ಹೇಳಲಾಗಿದೆ. ನಾಸಾ ಪ್ರಕಾರ, ಈ ಫೋಟೋವನ್ನು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ಐಎಸ್‌ಎಸ್) ದ ಸಿಬ್ಬಂದಿಯೊಬ್ಬರು ಸೆರೆಹಿಡಿದಿದ್ದಾರೆ.
ಫೋಟೋದ ಬಲಭಾಗದಲ್ಲಿ ಅಥವಾ ಹಿಮಾಲಯದ ದಕ್ಷಿಣಕ್ಕೆ ಉತ್ತರ ಭಾರತ ಮತ್ತು ಪಾಕಿಸ್ತಾನದ ಫಲವತ್ತಾದ ಕೃಷಿ ಪ್ರದೇಶ ಕಾಣಬಹುದಾಗಿದೆ. ಇನ್ನು ಫೋಟೋದಲ್ಲಿ ಕಾಣುತ್ತಿರುವುದು ಒಂದು ದೆಹಲಿ ನಗರವಾದರೆ, ಇನ್ನೊಂದು ಪಾಕಿಸ್ತಾನದ ಲಾಹೋರ್ ನಗರ ಎಂದು ನಾಸಾ ತಿಳಿಸಿದೆ.