ಕರ್ನಾಟಕ

karnataka

ETV Bharat / bharat

ಕಾಂಗ್ರೆಸ್ ​​​- ಅಕಾಲಿದಳ ಕಾರ್ಯಕರ್ತರ ನಡುವೆ ಮಾರಾಮಾರಿ: ಅಕಾಲಿದಳ ಮುಖ್ಯಸ್ಥ ಸ್ವಲ್ಪದರಲ್ಲೇ ಬಚಾವ್​ - ಸ್ಥಳೀಯ ಅಭ್ಯರ್ಥಿ

ಪೊಲೀಸರ ಬೆಂಬಲದೊಂದಿಗೆ ಕಾಂಗ್ರೆಸ್ ಗೂಂಡಾಗಳು ನನ್ನ ಮೇಲೆ ದಾಳಿ ನಡೆಸಿದ್ದಾರೆ. ನನ್ನ ರಕ್ಷಣೆಗೆ ಬಂದ ಮೂವರು ಕಾರ್ಯಕರ್ತರಿಗೆ ಗುಂಡೇಟು ತಗುಲಿದೆ ಎಂದು ಸುಖ್ಬೀರ್ ಸಿಂಗ್ ಆರೋಪಿಸಿದ್ದಾರೆ.

narrow-escape-for-sukhbir-badal-as-cong-akalis-clash-in-punjab
ಅಕಾಲಿದಳ ಮುಖ್ಯಸ್ಥ ಸ್ವಲ್ಪದರಲ್ಲೆ ಬಚಾವ್​

By

Published : Feb 2, 2021, 4:27 PM IST

ಫಜಿಲ್ಕಾ (ಪಂಜಾಬ್):ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ದಿನಾಂಕ ನಿಗದಿಯಾಗಿದ್ದು, ಈ ಹಿನ್ನೆಲೆ ಪಕ್ಷಗಳ ನಡುವಿನ ಕಿತ್ತಾಟ ಬೀದಿಗೆ ಬಂದಿದೆ. ಇದೀಗ ಕಾಂಗ್ರೆಸ್​​ ಹಾಗೂ ಶಿರೋಮಣಿ ಅಕಾಲಿ ದಳ ಪಕ್ಷದ ಕಾರ್ಯಕರ್ತರು ಬೀದಿಯಲ್ಲಿ ಕಲ್ಲು ತೂರಾಟ ನಡೆಸಿದ್ದು, ಅಕಾಲಿದಳದ ಮುಖ್ಯಸ್ಥ ಸುಖ್ಬೀರ್​​​​ ಸಿಂಗ್ ಬಾದಲ್​​ ಸ್ಪಲ್ಪದರಲ್ಲಿಯೇ ಪಾರಾಗಿರುವ ಘಟನೆ ನಡೆದಿದೆ.

ಕಾಂಗ್ರೆಸ್​​​​​-ಅಕಾಲಿದಳ ಕಾರ್ಯಕರ್ತರ ನಡುವೆ ಮಾರಾಮಾರಿ

ಸ್ಥಳೀಯ ಸಂಸ್ಥೆ ಚುನಾವಣೆ ಹಿನ್ನೆಲೆ ಸ್ಥಳೀಯ ಅಭ್ಯರ್ಥಿ ಜೊತೆ ನಾಮಪತ್ರ ಸಲ್ಲಿಸಲು ತಹಶೀಲ್ದಾರ್ ಕಚೇರಿಗೆ ಆಗಮಿಸುವ ವೇಳೆ ಕಾಂಗ್ರೆಸ್ ಕಾರ್ಯಕರ್ತರು ದಾಳಿ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಎರಡೂ ಪಕ್ಷದ ಕಾರ್ಯಕರ್ತರು ಪರಸ್ಪರ ಕಲ್ಲು ತೂರಾಟ ನಡೆಸಿದ್ದು, ಸುಖ್ವೀರ್ ಸಿಂಗ್​​ ಕಾರಿನ ಮೇಲೆ ದಾಳಿ ಮಾಡಿ ಭಾಗಶಃ ಹಾನಿಯಾಗಿದೆ.

ಪೊಲೀಸರ ಬೆಂಬಲದೊಂದಿಗೆ ಕಾಂಗ್ರೆಸ್ ಗೂಂಡಾಗಳು ನನ್ನ ಮೇಲೆ ದಾಳಿ ನಡೆಸಿದ್ದಾರೆ. ಮೂವರು ಕಾರ್ಯಕರ್ತರಿಗೆ ಗುಂಡೇಟು ತಗುಲಿದೆ ಎಂದು ಸುಖ್ಬೀರ್ ಸಿಂಗ್ ಆರೋಪಿಸಿದ್ದಾರೆ.

ಘಟನೆ ವೇಳೆ ಎರಡೂ ಕಡೆಯಿಂದಲೂ ಕಲ್ಲು ತೂರಾಟ ನಡೆದಿದ್ದು, ಗಾಳಿಯಲ್ಲಿ ಗುಂಡು ಹಾರಿಸಿರುವುದು ಸಹ ವರದಿಯಾಗಿದೆ.

ಇದನ್ನೂ ಓದಿ:ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಮತಾ ಬ್ಯಾನರ್ಜಿ ಡ್ಯಾನ್ಸ್​.. ವಿಡಿಯೋ!

ABOUT THE AUTHOR

...view details