ಕರ್ನಾಟಕ

karnataka

ETV Bharat / bharat

ನೂತನ 'ಮಹಾ ಕಾಲ್ ಎಕ್ಸ್​ಪ್ರೆಸ್'ಗೆ ಪ್ರಧಾನಿ ಮೋದಿ ಹಸಿರು ನಿಶಾನೆ - ವಾರಣಾಸಿ

ಭಾರತೀಯ ರೈಲ್ವೇ ಕ್ಯಾಟರಿಂಗ್​ ಮತ್ತು ಪ್ರವಾಸೋಧ್ಯಮ ನಿಗಮದ (ಐಆರ್​ಸಿಟಿಸಿ) ನೂತನ "ಮಹಾ ಕಾಲ್​ ಎಕ್ಸ್​ಪ್ರೆಸ್"​ ರೈಲಿಗೆ ವೀಡಿಯೋ ಕಾನ್ಪರೆನ್ಸ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಹಸಿರು ನಿಶಾನೆ ತೋರಿದ್ದಾರೆ.

ಮಹಾ ಕಾಲ್ ಎಕ್ಸಪ್ರೆಸ್
ಮಹಾ ಕಾಲ್ ಎಕ್ಸಪ್ರೆಸ್

By

Published : Feb 16, 2020, 5:19 PM IST

ವಾರಣಾಸಿ (ಉತ್ತರ ಪ್ರದೇಶ): ಭಾರತೀಯ ರೈಲ್ವೇ ಕ್ಯಾಟರಿಂಗ್​ ಮತ್ತು ಪ್ರವಾಸೋಧ್ಯಮ ನಿಗಮದ (ಐಆರ್​ಸಿಟಿಸಿ) ನೂತನ "ಮಹಾ ಕಾಲ್​ ಎಕ್ಸ್​ಪ್ರೆಸ್"​ ರೈಲಿಗೆ ವೀಡಿಯೋ ಕಾನ್ಪರೆನ್ಸ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಹಸಿರು ನಿಶಾನೆ ತೋರಿದ್ದಾರೆ.

ಖಾಸಗಿ ರೈಲ್ವೇ ನೆಟ್​ವರ್ಕ್​ನ ಮೂರನೇ ರೈಲು ಇದಾಗಿದ್ದು, ಫೆಬ್ರವರಿ 20 ರಿಂದ ವಾರಣಾಸಿ-ಇಂದೋರ್ ಮಾರ್ಗದಲ್ಲಿ ಸೇವೆ ಪ್ರಾರಂಭಿಸಲಿದೆ. ರಾತ್ರಿ ಸೇವೆ ನೀಡುವ ದೇಶದ ಮೊದಲ ಖಾಸಗಿ ರೈಲು ಮಹಾ ಕಾಲ್​, ಉತ್ತರ ಪ್ರದೇಶದ ವಾರಣಾಸಿಯ ಮೂರು ಜ್ಯೋತಿರ್ಲಿಂಗ ಯಾತ್ರಾ ಕೇಂದ್ರಗಳನ್ನು ಮತ್ತು ಮಧ್ಯಪ್ರದೇಶದ ಉಜ್ಜಯಿನಿ, ಓಂಕಾರೇಶ್ವರಗಳನ್ನು ಸಂಪರ್ಕಿಸಲಿದೆ. ಈ ವಿಶೇಷ ರೈಲಿನಲ್ಲಿ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುವ ಪ್ಯಾಕೇಜ್‌ಗಳನ್ನು ಐಆರ್‌ಸಿಟಿಸಿ ನೀಡಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಅಲ್ಲದೆ, ರೈಲಿನಲ್ಲಿ ಪ್ರಯಾಣಿಸುವ ಪ್ರತಿಯೊಬ್ಬ ಪ್ರಯಾಣಿಕರಿಗೆ ಪ್ರಯಾಣದ ಸಮಯದಲ್ಲಿ 10 ಲಕ್ಷ ರೂ.ಗಳ ಪ್ರಯಾಣ ವಿಮೆಯನ್ನು ನೀಡಲಾಗುತ್ತದೆ ಎಂದು ಐಆರ್​ಅಸಿಟಿಸಿ ತಿಳಿಸಿದೆ. ಮಹಾ ಕಾಲ್ ಎಕ್ಸ್‌ಪ್ರೆಸ್‌ಗಾಗಿ ಐಆರ್‌ಸಿಟಿಸಿ ವೆಬ್‌ಸೈಟ್ ಮತ್ತು ಮೊಬೈಲ್ ಆ್ಯಪ್ "ಐಆರ್​ಸಿಟಿಸಿ ರೈಲ್ ಕನೆಕ್ಟ್' ನಲ್ಲಿ ಬುಕಿಂಗ್​ ಮಾಡಬಹುದು. ಈ ರೈಲು 120 ದಿನಗಳ ಮುಂಗಡ ಕಾಯ್ದಿರಿಸುವ ಅವಧಿಯನ್ನು ಹೊಂದಿರುತ್ತದೆ ಮತ್ತು ಸಾಮಾನ್ಯ ಮತ್ತು ವಿದೇಶಿ ಪ್ರವಾಸಿ ಕೋಟಾ ಒಳಗೊಂಡಿದೆ.

ABOUT THE AUTHOR

...view details