ಕರ್ನಾಟಕ

karnataka

ETV Bharat / bharat

ಬಾಲಿವುಡ್​​ ಹಾಸ್ಯ ನಟಿ ಭಾರತಿ ಸಿಂಗ್ ಮನೆ ಮೇಲೆ ಎನ್​ಸಿಬಿ ದಾಳಿ - ಟ ಅರ್ಜುನ್ ರಾಮ್​​​ಪಾಲ್

ಬಾಲಿವುಡ್​​ ಅಂಗಳದಲ್ಲಿ ಡ್ರಗ್ಸ್ ಬೇಟೆ ಮುಂದುವರಿದಿದೆ. ಎನ್​ಸಿಬಿ ಅಧಿಕಾರಿಗಳು ಇಂದೂ ಹಾಸ್ಯ ನಟಿ ಭಾರತಿ ಸಿಂಗ್ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ ಎನ್ನಲಾಗಿದ್ದು, ಮಾದಕ ವಸ್ತು ದೊರೆತಿರುವ ಕುರಿತು ಯಾವುದೇ ಮಾಹಿತಿ ತಿಳಿದುಬಂದಿಲ್ಲ.

narcotics-control-bureau-conducts-a-raid-at-the-residence-of-comedian-bharti-singh-in-mumbai-ncb
ಬಾಲಿವುಡ್​​ ಹಾಸ್ಯ ನಟಿ ಭಾರತಿ ಸಿಂಗ್ ಮನೆ ಮೇಲೆ ಎನ್​ಸಿಬಿ ದಾಳಿ

By

Published : Nov 21, 2020, 1:46 PM IST

ಮುಂಬೈ: ಬಾಲಿವುಡ್​ನಲ್ಲಿ ಡ್ರಗ್ಸ್ ಸೇವನೆ ಮತ್ತು ನಂಟು ಆರೋಪದಡಿ ಎನ್​ಸಿಬಿ ಅಧಿಕಾರಿಗಳು ಹಲವು ಕಡೆ ದಾಳಿ ನಡೆಸಿದ್ದಾರೆ. ಇದೀಗ ಬಾಲಿವುಡ್​​ ಸಿನಿಮಾ ಮತ್ತು ರಿಯಾಲಿಟಿ ಶೋನಲ್ಲಿ ಕಾಣಿಸಿಕೊಳ್ಳುತ್ತಿದ್ದ ಹಾಸ್ಯ ನಟಿ ಭಾರತಿ ಸಿಂಗ್ ನಿವಾಸದ ಮೇಲೂ ದಾಳಿ ನಡೆಸಲಾಗಿದೆ ಎನ್ನಲಾಗ್ತಿದೆ.

ಡ್ರಗ್ಸ್ ಪ್ರಕರಣ ಸಂಬಂಧ ಹಲವು ಬಾರಿ ದಾಳಿ ನಡೆಸಿರುವ ಎನ್​ಸಿಬಿ ಹಲವು ನಟ - ನಟಿಯರ ಮನೆಯಲ್ಲೂ ಹುಡುಕಾಟ ನಡೆಸಿದ್ದಾರೆ ಎನ್ನಲಾಗಿದೆ. ಅಲ್ಲದೇ ನಟಿ ಹಾಗೂ ಆಕೆಯ ಪತಿ ಬ್ಯಾನ್ ಆಗಿರುವ ಔಷಧ ಬಳಕೆ ಮಾಡಿರುವ ಕುರಿತು ಮಾಹಿತಿ ದೊರಕಿದೆ ಎಂದು ಮೂಲಗಳು ತಿಳಿಸಿವೆ.

ಇದಕ್ಕೂ ಮೊದಲು ನಟ ಅರ್ಜುನ್ ರಾಮ್​​​ಪಾಲ್ ಮನೆಯಲ್ಲೂ ಹುಡುಕಾಟ ನಡೆಸಿದ್ದ ಎನ್​ಸಿಬಿ ಬಳಿಕ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿತ್ತು. ಬಳಿಕ ವಿಚಾರಣೆಗೆ ಹಾಜರಾಗಿದ್ದ ಅರ್ಜುನ್​ಗೆ ಸತತ 6 ಗಂಟೆಗಳ ವಿಚಾರಣೆ ನಡೆಸಲಾಗಿತ್ತು.

ಇದಲ್ಲದೇ ಚಲನಚಿತ್ರ ನಿರ್ಮಾಪಕ ಫಿರೋಜ್ ನಾಡಿಯಾವಾಲಾರನ್ನು ವಿಚಾರಣೆಗೆ ಕರೆಸಲಾಗಿತ್ತು. ಅವರ ಪತ್ನಿ ಶಬಾನಾ ಸಯೀದ್ ವಾಸವಿದ್ದ ಮುಂಬೈ ನಿವಾಸದಲ್ಲಿ 10 ಗ್ರಾಂನಷ್ಟು ಗಾಂಜಾ ದೊರೆತಿದ್ದ ಬಳಿಕ ಅವರನ್ನು ಬಂಧಿಸಲಾಗಿತ್ತು. ಬಳಿಕ ಅವರಿಗೆ ಜಾಮೀನು ನೀಡಲಾಗಿತ್ತು.

ABOUT THE AUTHOR

...view details