ಹೈದರಾಬಾದ್: ಕಾಂಗ್ರೆಸ್ ಪಕ್ಷವು ನೆಹರೂ - ಗಾಂಧಿ ಕುಟುಂಬವನ್ನೇ ಕೇಂದ್ರೀಕರಿಸಿ, ಮಾಜಿ ಪ್ರಧಾನಿ ಪಿ.ವಿ. ನರಸಿಂಹರಾವ್ ಅವರನ್ನು ಮೂಲೆಗುಂಪು ಮಾಡಿತು ಎಂದು ಅವರ ಮೊಮ್ಮಗ ಎನ್.ವಿ. ಸುಭಾಷ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬಿಜೆಪಿಯೊಂದಿಗೆ ಗುರ್ತಿಸಿಕೊಂಡಿರುವ ಅವರು, ಕಾಂಗ್ರೆಸ್ ಪಕ್ಷ ನರಸಿಂಹರಾವ್ ಅವರ ಜನ್ಮದಿನದಂದು ಗೌರವ ಸಲ್ಲಿಸಿಲ್ಲ. ಈ ತಪ್ಪಿಗೆ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಕ್ಷಮೆ ಯಾಚಿಸಬೇಕು ಎಂದೂ ಆಗ್ರಹಿಸಿದ್ದಾರೆ.
ಪಿ.ವಿ. ನರಸಿಂಹರಾವ್ ಅವರ ಮೊಮ್ಮಗ ಎನ್.ವಿ. ಸುಭಾಷ್ 1996ರಲ್ಲಿ ಕಾಂಗ್ರೆಸ್ ಪರಾಭವಗೊಂಡ ನಂತರ ನರಸಿಂಹರಾವ್ ಹಾಗೂ ಅವರ ಸರ್ಕಾರದ ಯೋಜನೆಗಳು ಕಡೆಗಣಿಸಲ್ಪಟ್ಟವು. ನೆಹರೂ - ಗಾಂಧಿ ಕುಟುಂಬದ ಕಡೆಗೆ ಹೆಚ್ಚಿನ ಗಮನ ಹರಿಸಿ, ಇವರನ್ನು ಮೂಲೆಗುಂಪು ಮಾಡಿತು. ಕಾಂಗ್ರೆಸ್ನ ಎಲ್ಲ ವೈಫಲ್ಯಗಳನ್ನು ನರಸಿಂಹರಾವ್ ಮೇಲೆ ಹಾಕಲಾಯ್ತು. ಅದೇ ಅವರ ಸಾಧನೆಗಳನ್ನು ಮುನ್ನೆಲೆಗೆ ತರಲಿಲ್ಲ ಎಂದು ಆರೋಪಿಸಿದರು.
ನರಸಿಂಹ ರಾವ್ ಅವರ 98ನೇ ಜನ್ಮದಿನದಂದು ಯಾವೊಬ್ಬ ತೆಲಂಗಾಣದ ಕಾಂಗ್ರೆಸಿಗನೂ ಅವರಿಗೆ ಗೌರವ ಸಲಿಸಲಿಲ್ಲ. ಆದರೆ ಬಿಜೆಪಿ, ಟಿಆರ್ಎಸ್ ಹಾಗೂ ಟಿಡಿಪಿ ಪಕ್ಷದವರು ಗೌರವ ಸಲ್ಲಿಸಿದರು. 1991ರಲ್ಲಿ ರಾಜೀವ್ ಹತ್ಯೆ ನಂತರ, ಅಂದಿನ ವಿತ್ತ ಸಚಿವ ಮನಮೋಹನ್ ಸಿಂಗ್ ಜತೆಗೆ ನರಸಿಂಹರಾವ್ ದೇಶಕ್ಕೆ ನೀಡಿದ ಕೊಡುಗೆ ಅನನ್ಯ. ಇದನ್ನು ಪ್ರಧಾನಿ ಮೋದಿ ಸ್ಮರಿಸಿದರು. ಆದರೆ ಕಾಂಗ್ರೆಸ್ಗೆ ಕೃತಜ್ಞತೆ ಇಲ್ಲ ಎಂದು ಹೇಳಿದರು.
_______