ಮೈಸೂರು: ತಾಯಿ ಮೇಲಿನ ಅಪಾರ ಪ್ರೀತಿಗಾಗಿ ಬ್ಯಾಂಕ್ನಲ್ಲಿನ ಕೆಲಸವನ್ನೇ ತೊರೆದು ಸ್ಕೂಟರ್ನಲ್ಲಿ ಅಮ್ಮನ ಜೊತೆ ಕೃಷ್ಣ ಕುಮಾರ್ ತೀರ್ಥಯಾತ್ರೆ ಮಾಡುತ್ತಿರುವ ಕೃಷ್ಣಕುಮಾರ್ ಅವರ ಸೇವೆ ನೋಡಿ ಮಹೀಂದ್ರಾ ಕಂಪನಿಯ ಮುಖ್ಯಸ್ಥ, ಉದ್ಯಮಿ ಆನಂದ್ ಮಹೀಂದ್ರಾ ಫುಲ್ ಫಿದಾ ಆಗಿದ್ದಾರೆ.
ಮೈಸೂರಿನ ತಾಯಿ-ಮಗನ ಪ್ರೀತಿಗೆ ಆನಂದ್ ಮಹಿಂದ್ರಾ ಫಿದಾ... ಕಾರು ನೀಡಲು ಮುಂದಾದ ಉದ್ಯಮಿ! - ಆನಂದ್ ಮಹಿಂದ್ರಾ ಫಿದಾ
ಹಳೇ ಸ್ಕೂಟರ್ ಹಿಂದೆ ಕುರಿಸಿಕೊಂಡು ದೇಶ ಸಂಚಾರ ನಡೆಸುತ್ತಿರುವ ಮೈಸೂರಿನ ವ್ಯಕ್ತಿಯೋರ್ವನ ಕಾರ್ಯಕ್ಕೆ ಮಹೀಂದ್ರಾ ಕಂಪನಿಯ ಮುಖ್ಯಸ್ಥ, ಉದ್ಯಮಿ ಆನಂದ್ ಮಹೀಂದ್ರಾ ಫುಲ್ ಫಿದಾ ಆಗಿದ್ದಾರೆ.
ಮೈಸೂರಿನ ದಕ್ಷಿಣಮೂರ್ತಿ ಕೃಷ್ಣ ಕುಮಾರ್ ಈಗಾಗಲೇ ತಮ್ಮ ತಾಯಿ ಜತೆ ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ, ಗೋವಾ, ಪುದುಚೇರಿ, ಸೇರಿದಂತೆ ನೇಪಾಳ, ಮ್ಯಾನ್ಮಾರ್ ಸೇರಿದಂತೆ ಹಲವು ಸ್ಥಳಗಳಿಗೆ ಸ್ಕೂಟರ್ ಮೇಲೆಯೇ ಭೇಟಿ ನೀಡಿದ್ದಾರೆ. ಇವರ ಕೆಲಸಕ್ಕೆ ಈಗಾಗಲೇ ಎಲ್ಲಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ. 70 ವರ್ಷದ ತಾಯಿಯೊಂದಿಗೆ ಈಗಾಗಲೇ ಬರೋಬ್ಬರಿ 48,100 ಕಿಮೀ ಕ್ರಮಿಸಿರುವ ಕೃಷ್ಣ ಕುಮಾರ್ ಮದುವೆಯಾಗಿಲ್ಲ.
ತಮ್ಮ ತಂದೆ ಬಳಕೆ ಮಾಡುತ್ತಿದ್ದ ಸುಮಾರು 40 ವರ್ಷಗಳ ಹಳೇ ಸ್ಕೂಟರ್ನಲ್ಲೇ ತಮ್ಮ ತಾಯಿಯನ್ನು ಕುಳಿರಿಸಿಕೊಂಡು ತಿರ್ಥಯಾತ್ರೆ ನಡೆಸುತ್ತಿದ್ದಾರೆ. ಸದ್ಯ ಇವರ ಕೆಲಸಕ್ಕೆ ಫಿದಾ ಆಗಿರುವ ಉದ್ಯಮಿ ಆನಂದ್ ಮಹೀಂದ್ರಾ ಮಹೀಂದ್ರ ಕೆಯುವಿ 100 ಎನ್‍ಎಕ್ಸ್‍ಟಿ ಕಾರನ್ನು ಗಿಫ್ಟ್ ನೀಡುವುದಾಗಿ ಟ್ವೀಟ್ ಮಾಡಿದ್ದಾರೆ.