ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಈಶಾನ್ಯ ಭಾಗದಲ್ಲೀಗ ನೀರವ ಮೌನ. ಕಳೆದ ವಾರ ಇಲ್ಲಿನ ಹಲವು ಪ್ರದೇಶಗಳಲ್ಲಿ ನಡೆದ ಗಲಭೆಯ ಪರಿಣಾಮ 40 ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದರೆ, ನೂರಾರು ಜನರು ಗಾಯಗೊಂಡು ನಗರದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಿಂಸಾಚಾರ ಪೀಡಿತ ಪ್ರದೇಶಗಳಲ್ಲಿ ಒಂದಾದ ಬ್ರಹ್ಮಪುರಿಯಲ್ಲಿ ಗಲಭೆಯ ಧೂಳಿನ ಕಣ ಇನ್ನೂ ಬೂದಿ ಮುಚ್ಚಿದ ಕೆಂಡದಂತಿದೆ.
ಈದ್, ಹೋಳಿ, ದೀಪಾವಳಿ ಹಬ್ಬಗಳನ್ನು ಧರ್ಮ ಭೇದಗಳಿಲ್ಲದೇ ಹಿಂದೂ-ಮುಸ್ಲಿಂರೆಲ್ಲ ಒಟ್ಟಿಗೇ ಆಚರಿಸುತ್ತಿದ್ದೇವೆ. ಆದರೆ ಹೊರಗಿನಿಂದ ಬಂದ ಕಿಡಿಗೇಡಿಗಳು ಶಾಂತಿಗೆ ಭಂಗ ತಂದಿದ್ದಾರೆ. ಇಲ್ಲಿನ ಹಿಂದೂ-ಮುಸ್ಲಿಂರ ನಡುವೆ ಇರುವ ಹಲವಾರು ವರ್ಷಗಳ ಉತ್ತಮ ಸಂಬಂಧವನ್ನು ಕೆಡಿಸಲು ದುಷ್ಕರ್ಮಿಗಳು ಯತ್ನಿಸಿದ್ದಾರೆ ಎಂದು ಬ್ರಹ್ಮಪುರಿ ನಿವಾಸಿಗಳು ಹೇಳುತ್ತಿದ್ದಾರೆ.
ತಮ್ಮ ನೆಮ್ಮದಿ ಕೆಡಿಸಿದ ಕಿಡಿಗೇಡಿಗಳ ವಿರುದ್ಧ ಬ್ರಹ್ಮಪುರಿ ನಿವಾಸಿಗಳಆಕ್ರೋಶ ಈಟಿವಿ ಭಾರತ್ನೊಂದಿಗೆ ತಮ್ಮ ನೋವಿನ ಕಥೆಯನ್ನು ಹಂಚಿಕೊಂಡ ಬ್ರಹ್ಮಪುರಿ ನಿವಾಸಿಗಳು, ನಾವು ಇಲ್ಲಿ ವಾಸಿಸಲು ಆರಂಭಿಸಿದಾಗಿನಿಂದಲೂ ಈ ರೀತಿಯ ಯಾವುದೇ ಗಲಾಟೆ, ಸಾವು-ನೋವುಗಳು ಸಂಭವಿಸಿರಲಿಲ್ಲ. ಈ ಘಟನೆ ನಡೆಯುವವರೆಗೂ ನಾವು ಪರಸ್ಪರ ಹೊಂದಿಕೊಂಡು ಬಾಳುತ್ತಿದ್ದೆವು. ಕಳೆದ 40-50 ವರ್ಷಗಳಿಂದ ಹಿಂದೂ- ಮುಸ್ಲಿಂರೂ ಒಟ್ಟಿಗೆ ಜೀವನ ಸಾಗಿಸುತ್ತಿದ್ದೇವೆ. ಒಂದು ದಿನವೂ ಸಹ ಈ ರೀತಿಯ ಆತಂಕದ ಘಟನೆಗಳು ನಡೆದಿರಲಿಲ್ಲ. ಈ ಹಿಂಸಾಚಾರವೂ ಬ್ರಹ್ಮಪುರಿ ನಿವಾಸಿಗಳಲ್ಲಿ ಆತಂಕ ಮೂಡಿಸುವುದರ ಜೊತೆಗೆ, ತಮ್ಮ-ತಮ್ಮ ಕಾಲೋನಿಗಳಲ್ಲಿ ಓಡಾಡಲು ಹೆದರುವ ವಾತಾವರಣ ನಿರ್ಮಾಣವಾಗಿತ್ತು ಎಂದು ಹೇಳಿದ್ದಾರೆ.
ಇಷ್ಟು ವರ್ಷಗಳ ಕಾಲ ಇಲ್ಲದ ಈ ಸಮಸ್ಯೆಯನ್ನು ದ್ವಿಗುಣಗೊಳಿಸದಂತೆ ನೋಡಿಕೊಳ್ಳಲು, ಹಿಂದೂ- ಮುಸ್ಲಿಂ ನಿವಾಸಿಗಳು ಒಟ್ಟಾಗಿ, ಪ್ರತಿ ಕಾಲೋನಿಯಲ್ಲಿ ಗಸ್ತು ತಿರುಗುವುದು ಮತ್ತು ಯಾವುದೇ ಸಮಯದಲ್ಲಿ ಎದುರಾಗುವ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಸನ್ನದ್ಧರಾಗಿ ಕಾಯುತ್ತಿದ್ದೆವು ಎಂದು ಮತ್ತೋರ್ವ ನಿವಾಸಿ ತಮ್ಮ ಸಾಮರಸ್ಯದ ಜೀವನ ಕುರಿತು ವಿವರಿಸಿದರು.