ಕರ್ನಾಟಕ

karnataka

ETV Bharat / bharat

ಗೋ ಹತ್ಯೆ ತಡೆಯಲು ಮುಂದಾಗಿದ್ದಕ್ಕೆ ಮುಸ್ಲಿಂ ಯುವಕನ ಕತ್ತು ಸೀಳಿ ಕೊಲೆ..! - ಜಾರ್ಖಂಡ್ ಅಪರಾಧ ಸುದ್ದಿ

ಗೋಹತ್ಯೆ ತಡೆಯಲು ಮುಂದಾದ ಮುಸ್ಲಿಂ ಯುವಕನನ್ನು ಅದೇ ಸಮುದಾಯದ ಇಬ್ಬರು ವ್ಯಕ್ತಿಗಳು ಕತ್ತು ಸೀಳಿ ಕೊಲೆ ಮಾಡಿದ ಘಟನೆ ಜಾರ್ಖಂಡ್​ನಲ್ಲಿ ನಡೆದಿದೆ.

representational image
ಪ್ರಾತಿನಿಧಿಕ ಚಿತ್ರ

By

Published : Oct 20, 2020, 7:49 PM IST

ರಾಂಚಿ(ಜಾರ್ಖಂಡ್​​):ಗೋವುಗಳ ಹತ್ಯೆಯನ್ನು ತಡೆಯಲು ಹೋದ ಮುಸ್ಲಿಂ ಯುವಕನನ್ನು ಆತನ ಸಮುದಾಯದವರೇ ಕತ್ತು ಸೀಳಿ ಕೊಂದ ಘಟನೆ ಜಾರ್ಖಂಡ್​ನ ಗರ್ವಾ ಜಿಲ್ಲೆಯಲ್ಲಿ ನಡೆದಿದೆ.

ಉಚಾರಿ ಗ್ರಾಮದಲ್ಲಿ ಸೋಮವಾರ ರಾತ್ರಿ ಪ್ರಕರಣ ನಡೆದಿದ್ದು, ಮೊಹಮ್ಮದ್ ಅರ್ಜೂ (18) ಕೊಲೆಗೀಡಾಗಿರುವ ಯುವಕ. ಆರೋಪಿಗಳನ್ನು ಮುನ್ನು ಖುರೇಶಿ ಹಾಗೂ ಕೈಲ್ ಖುರೇಶಿ ಎಂದು ಗುರುತಿಸಲಾಗಿದೆ.

ಸದ್ಯಕ್ಕೆ ಇಬ್ಬರೂ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಕೊಲೆಯಾದ ಮೊಹಮ್ಮದ್ ಅರ್ಜೂ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ.

ವಿಷಯ ತಿಳಿಯುತ್ತಿದ್ದಂತೆ ಧಾವಿಸಿದ ಕುಡಿಯುವ ನೀರು ಮತ್ತು ಒಳಚರಂಡಿ ಅಭಿವೃದ್ಧಿ ಸಚಿವ ಮಿಥಿಲೇಶ್ ಠಾಕೂರ್ ಘಟನೆಯ ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಂಡಿದ್ದಾರೆ.

ಈ ಕುರಿತಂತೆ ಪ್ರತಿಕ್ರಿಯಿಸಿರುವ ಕೊಲೆಯಾದ ಯುವಕನ ತಾಯಿ ನನ್ನ ಮಗ ಹಸುಗಳನ್ನು ಕೊಲ್ಲುವುದನ್ನು ತಡೆಯುತ್ತಿದ್ದ. ಇದರಿಂದಾಗಿ ನಮ್ಮ ಸಮುದಾಯದವರಿಂದಲೇ ಆತನ ಕೊಲೆಯಾಗಿದ್ದು, ನನ್ನ ಮಗನ ಸಾವಿಗೆ ನ್ಯಾಯ ಒದಗಿಸಿ ಎಂದು ಒತ್ತಾಯಿಸಿದ್ದಾರೆ.

ABOUT THE AUTHOR

...view details