ಹೈದರಾಬಾದ್: ಹಿಂದೂ ಮಹಿಳೆಯ ಅಂತ್ಯಕ್ರಿಯೆ ನಡೆಸಿ ಈ ಮುಸ್ಲಿಂ ಯುವಕರು ಮಾನವೀಯತೆ ಮೆರೆದಿದ್ದಾರೆ.
ಹಿಂದೂ ಮಹಿಳೆಯ ಅಂತ್ಯಕ್ರಿಯೆ ನಡೆಸಿ ಮಾನವೀಯತೆ ಮೆರೆದ ಮುಸ್ಲಿಂ ಯುವಕರು!
ಅನಾರೋಗ್ಯದಿಂದ ಸಾವಿಗೀಡಾದ ಹಿಂದೂ ಮಹಿಳೆಯ ಅಂತ್ಯಕ್ರಿಯೆಗೆ ಯಾರೂ ಭಾಗಿಯಾಗದ ಹಿನ್ನೆಲೆ ಮುಸ್ಲಿಂ ಯುವಕರೇ ಮುಂದೆನಿಂತು ಸ್ವಂತ ಖರ್ಚಿನಿಂದ ಹಿಂದೂ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಸಿ ಮಾನವೀಯತೆ ಮೆರೆದಿದ್ದಾರೆ.
ಕಿಶನ್ ರಾಜ್ ಗೌಡ್ ಮತ್ತು ಎಲ್ಲಮ್ಮ ಎಂಬ ದಂಪತಿ ತೆಲಂಗಾಣದ ನಿರ್ಮಲ್ ಜಿಲ್ಲೆಯ ಗಜುಲಪೇಟ್‌ನ ಸಣ್ಣ ಗುಡಿಸಲಿನಲ್ಲಿ ವಾಸಿಸುತ್ತಿದ್ದರು. ಕಳೆದ ವರ್ಷ ನಡೆದ ಅಪಘಾತದಲ್ಲಿ ಯಲ್ಲಮ್ಮ ಕಾಲು ಕಳೆದುಕೊಂಡಿದ್ದರು. ಲಾಕ್ ಡೌನ್ ಸಮಯದಲ್ಲಿ ಯಲ್ಲಮ್ಮನ ತೊಂದರೆಯನ್ನು ಗಮನಿಸಿದ್ದ ಈ ಮುಸ್ಲಿಂ ಸಮುದಾಯದ ಯುವಕರು ಆವರಿಗೆ ಆಹಾರ ನೀಡುತ್ತಿದ್ದರು. ಆದರೆ, ಯಲ್ಲಮ್ಮ ನಿರ್ಜಲೀಕರಣಗೊಂಡಿದ್ದರಿಂದ ನಿಧನರಾಗಿದ್ದಾರೆ.
ಇನ್ನು ಯಲ್ಲಮ್ಮ ಅವರ ಅಂತ್ಯಕ್ರಿಯೆ ಮಾಡಲು ಯಾರೂ ಮುಂದೆ ಬರಲಿಲ್ಲವಾದ್ದರಿಂದ ಗೃಹರಕ್ಷಕ ಅಜರ್ ಎಂಬುವರು ಸ್ಥಳೀಯ ಕೌನ್ಸೆಲರ್ ಇಮ್ರಾನ್ ಉಲ್ಲಾ ಅವರನ್ನು ಸಂಪರ್ಕಿಸಿದರು. ತಕ್ಷಣ, ಸಹಾರಾ ಮುಸ್ಲಿಂ ಯುವಕರು ಆಗಮಿಸಿ ತಮ್ಮ ಸ್ವಂತ ಖರ್ಚಿನಲ್ಲಿ ಹಿಂದೂ ಸಂಪ್ರದಾಯದಂತೆ ಯಲ್ಲಮ್ಮನ ಅಂತ್ಯಕ್ರಿಯೆ ನೆರವೇರಿಸಿದರು.