ಲಖನೌ(ಉತ್ತರಪ್ರದೇಶ): ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ 32 ಆರೋಪಿಗಳನ್ನು ದೋಷ ಮುಕ್ತಗೊಳಿಸಿ ಲಖನೌದ ಸಿಬಿಐ ಕೋರ್ಟ್ ಇಂದು ತೀರ್ಪು ನೀಡಿದೆ. ಆದರೆ ಸಿಬಿಐ ವಿಶೇಷ ಕೋರ್ಟ್ ನೀಡಿರುವ ತೀರ್ಪಿನ ವಿರುದ್ಧ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವುದಾಗಿ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್‌ಬಿ) ತಿಳಿಸಿದೆ.
ಬಾಬ್ರಿ ಮಸೀದಿ ಧ್ವಂಸ ಪ್ರಕರಣ ತೀರ್ಪು : ಹೈಕೋರ್ಟ್ ಮೊರೆ ಹೋಗಲು ಮುಸ್ಲಿಂ ಲಾ ಬೋರ್ಡ್ ನಿರ್ಧಾರ ಕೋರ್ಟ್ ತೀರ್ಪಿನ ಬಗ್ಗೆ ಈಟಿವಿ ಭಾರತದೊಂದಿಗೆ ಮಾತನಾಡಿರುವ ಎಐಎಂಪಿಎಲ್‌ಬಿ ಕಾರ್ಯದರ್ಶಿ ಹಾಗೂ ಹಿರಿಯ ವಕೀಲ ಜಫರ್‌ಯಾಬ್ ಜಿಲಾನಿ, ಸಿಬಿಐ ಕೋರ್ಟ್ ನೀಡಿರುವ ತೀರ್ಪು ತಪ್ಪಾಗಿದೆ ಎಂದು ಹೇಳಿದ್ದಾರೆ.
ಬಾಬ್ರಿ ಮಸೀದಿ ಧ್ವಂಸ ಮಾಡಿರುವುದಾಗಿ ನೂರಾರು ಹೇಳಿಕೆ, ಸಾಕ್ಷ್ಯಾಧಾರಗಳಿದ್ದು, ಇದೊಂದು ಪ್ರಮುಖ ಕ್ರಿಮಿನಲ್ ಪ್ರಕರಣವಾಗಿದೆ. ಆರೋಪಿಗಳು ಡಯಾಜ್ ಮುಂದೆ ನಿಂತು ಮಾಡಿರುವ ಭಾಷಣಗಳನ್ನು ಐಪಿಎಸ್ ಅಧಿಕಾರಿಗಳು, ಪತ್ರಕರ್ತರು ಕೇಳಿದ್ದಾರೆ. ಆದರೆ ಸಾಕ್ಷ್ಯಾಧಾರಗಳನ್ನು ತಿರಸ್ಕಿರಿಸಿ ಕೋರ್ಟ್ ತೀರ್ಪು ನೀಡಿದೆ. ಆದರೆ, ನಾವು ಇದನ್ನು ಹೈಕೋರ್ಟ್‌ನಲ್ಲಿ ಸಾಬೀತು ಪಡಿಸುತ್ತೇವೆ ಎಂದು ಹೇಳಿದ್ದಾರೆ.
ಸಾರ್ವಜನಿಕರ ಮುಂದೆಯೇ ಬಾಬ್ರಿ ಸಮೀದಿ ಹೇಗೆ ಧ್ವಂಸವಾಯಿತು ಎಂದು ಪ್ರತಿಯೊಬ್ಬರಿಗೂ ಗೊತ್ತಿದೆ. ಆದರೆ ಈ ನೆಲದ ಕಾನೂನು ನ್ಯಾಯವನ್ನು ಚೂರು ಚೂರು ಮಾಡಿದೆ ಎಂದು ಎಐಎಂಪಿಎಲ್‌ಬಿ ಸದಸ್ಯ ಮೌಲಾನ ಖಲೀದ್ ರಷೀದ್ ಫಿರಂಗಿ ಮಹಾಲಿ ಕೋರ್ಟ್ ತೀರ್ಪಿಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಸೀದಿ ಧ್ವಂಸ ಪ್ರಕರಣದ ತೀರ್ಪು ನೀಡಿರುವ ಕೋರ್ಟ್, ಸಮಾಜದ ವಿರೋಧಿಗಳು ಬಾಬ್ರಿ ಮಸೀದಿಯನ್ನು ಧ್ವಂಸ ಮಾಡಿದ್ದಾರೆ. ಮತ್ತು ಇದು ಪೂರ್ವ ನಿಯೋಜಿತವಲ್ಲ ಹೀಗಾಗಿ 32 ಮಂದಿ ಆರೋಪಿಗಳು ನಿರ್ದೋಷಿಗಳು ಎಂದು ಹೇಳಿದೆ.