ಗುವಾಹಟಿ:ಅಸ್ಸಾಂನ ವಿವಿಧ 21 ಮುಸ್ಲಿಂ ಸಂಘಟನೆಗಳ ಒಕ್ಕೂಟವಾದ ಜನಗೋಷ್ಠಿಯ ಸಮನ್ವಯ ಪರಿಷದ್ ₹ 5 ಲಕ್ಷ ಹಾಗೂ ಮುಸ್ಲಿಂ ವಿದ್ಯಾರ್ಥಿಗಳ ಸಂಘಟನೆ ₹ 1 ಲಕ್ಷ ಹಣವನ್ನು ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣಕ್ಕೆ ದೇಣಿಗೆಯಾಗಿ ನೀಡಲು ಮುಂದಾಗಿದ್ದು, ಈ ಮೂಲಕ ಧಾರ್ಮಿಕ ಸೌಹಾರ್ದತೆ ಮೆರೆಯಲಾಗಿದೆ.
ಅಯೋಧ್ಯೆಯಲ್ಲಿ ಮಂದಿರ ನಿರ್ಮಿಸಲು ಮುಸ್ಲಿಂ ಸಂಘಟನೆಗಳಿಂದ ₹ 6 ಲಕ್ಷ ದೇಣಿಗೆ! - Fund donate to build Temple in Ayodhya
ಸುಪ್ರೀಂಕೋರ್ಟ್‌ನ ಐತಿಹಾಸಿಕ ತೀರ್ಪನ್ನು ಸ್ವಾಗತಿಸಿರುವ ಕೆಲ ಮುಸ್ಲಿಂ ಸಂಘಟನೆಗಳು ಅಯೋಧ್ಯೆಯಲ್ಲಿ ಮಂದಿರ ನಿರ್ಮಣಕ್ಕೆ ದೇಣಿಗೆ ನೀಡಲು ಮುಂದಾಗಿವೆ. ಶಾಂತಿಯಿಂದ ಧಾರ್ಮಿಕ ಸಾಮರಸ್ಯೆ ಕಾಪಾಡಿಕೊಳ್ಳುವುದು ನಮ್ಮ ಜವಾಬ್ದಾರಿ. ಮಂದಿರ ನಿರ್ಮಾಣಕ್ಕೆ ಇದ್ದ ತೊಡಕು ನಿವಾರಣೆ ಆಗಿದೆ ಎಂದು ಅಭಿಪ್ರಾಯಪಟ್ಟಿದೆ.
ಸಾಂದರ್ಭಿಕ
ನಾವು ಸುಪ್ರೀಂಕೋರ್ಟ್‌ನ ಐತಿಹಾಸಿಕ ತೀರ್ಪನ್ನು ಸ್ವಾಗತಿಸುತ್ತೇವೆ. ತೀರ್ಪನ್ನು ಸ್ವೀಕರಿಸಿ ಶಾಂತಿ ಮತ್ತು ಸೌಹಾರ್ದತೆ ಕಾಪಾಡಿಕೊಳ್ಳಬೇಕೆಂದು ನಾವು ಎಲ್ಲರನ್ನೂ ಕೋರುತ್ತೇವೆ. ಮಂದಿರ ನಿರ್ಮಾಣಕ್ಕಾಗಿ ನಮ್ಮ ಸಂಸ್ಥೆ 1 ಲಕ್ಷ ರೂ. ನೀಡುತ್ತದೆ ಎಂದು ವಿದ್ಯಾರ್ಥಿ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಮೈನುಲ್ ಹಕ್ ಹೇಳಿದ್ದಾರೆ.
ಸುಪ್ರೀಂಕೋರ್ಟ್ ನೀಡಿದ ಐತಿಹಾಸಿಕ ತೀರ್ಪಿನಿಂದ ಮಂದಿರ ನಿರ್ಮಿಸಲು ಇದ್ದ ತೊಡಕು ನಿವಾರಣೆ ಆಗಿದೆ. ಮಂದಿರ ನಿರ್ಮಿಸುವ ಟ್ರಸ್ಟ್ಗೆ ದೇಣಿಗೆ ನೀಡುತ್ತೇವೆ ಎಂದು ಸಮನ್ವಯ ಪರಿಷದ್ ಮುಖಂಡರು ಹೇಳಿದ್ದಾರೆ.