ಕರ್ನಾಟಕ

karnataka

ETV Bharat / bharat

ಅಯೋಧ್ಯೆ ತೀರ್ಪು ವಿಚಾರ.. ಮರು ಪರಿಶೀಲನಾ ಅರ್ಜಿ ಸಲ್ಲಿಸಲು ಮುಸ್ಲಿಂ ಕಾನೂನು ಮಂಡಳಿ ನಿರ್ಧಾರ..

ಇಂದು ಅಯೋಧ್ಯೆ ತೀರ್ಪಿನ ಬಗ್ಗೆ ಸಭೆ ನಡೆಸಿದ ಅಖಿಲ ಭಾರತ ಮುಸ್ಲಿಂ ಕಾನೂನು ಮಂಡಳಿ ಮರು ಪರಿಶೀಲನಾ ಅರ್ಜಿ ಸಲ್ಲಿಸಲು ತೀರ್ಮಾನಿಸಿದೆ.

ಅಯೋಧ್ಯೆ ತೀರ್ಪು ವಿಚಾರ

By

Published : Nov 17, 2019, 5:53 PM IST

ನವದೆಹಲಿ:ಅಯೋಧ್ಯೆ ವಿವಾದಿತ ಭೂಮಿ ವಿಚಾರಕ್ಕೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪುನ್ನ ಮರು ಪರಿಶೀಲನೆ ನಡೆಸುವಂತೆ ಅಖಿಲ ಭಾರತ ಮುಸ್ಲಿಂ ಕಾನೂನು ಮಂಡಳಿ ಅರ್ಜಿ ಸಲ್ಲಿಸಲು ನಿರ್ಧರಿಸಿದೆ ಎಂದು ಸುನ್ನಿ ವಕ್ಫ್​ ಬೋರ್ಡ್​ ಪರ ವಕೀಲ ಜಾಫರ್​ಯಾಬ್ ಜಿಲಾನಿ ತಿಳಿಸಿದ್ದಾರೆ.

ಮರು ಪರಿಶೀಲನಾ ಅರ್ಜಿ ಸಲ್ಲಿಸಲು ಮುಸ್ಲಿಂ ಕಾನೂನು ಮಂಡಳಿ ನಿರ್ಧಾರ..

ವಿವಾದಿತ 2.77 ಎಕರೆ ಜಾಗವನ್ನು ದೇವಾಲಯಕ್ಕೆ ಹಸ್ತಾಂತರಿಸುವ ಉನ್ನತ ನ್ಯಾಯಾಲಯದ ತೀರ್ಪು ಮತ್ತು ಪ್ರಮುಖ ಸ್ಥಳದಲ್ಲಿ ಮಸೀದಿಗೆ 5 ಎಕರೆ ಭೂಮಿಯನ್ನು ನೀಡುವ ಆದೇಶವನ್ನು ಉಲ್ಲೇಖಿಸಿದ್ದು, ಮಸೀದಿಗೆ ಬದಲಾಗಿ ನಾವು ಯಾವುದೇ ಭೂಮಿಯನ್ನು ಸ್ವೀಕರಿಸಲು ಸಾಧ್ಯವಿಲ್ಲ ಎಂದು ಕಾನೂನು ಮಂಡಳಿ ತಿಳಿಸಿದೆ. ಅಲ್ಲದೆ ಮುಂದಿನ ಒಂದು ತಿಂಗಳ ಒಳಗಾಗಿ ಅರ್ಜಿ ಸಲ್ಲಿಸಲಾಗುವುದು ಎಂದು ತಿಳಿಸಿದೆ.

ಈಗಾಗಲೇ ಮೂವರು ದಾವೆದಾರರನ್ನ ಗುರ್ತಿಸಲಾಗಿದೆ. ಆ ಮೂವರು ಮರು ಪರಿಶೀಲನಾ ಅರ್ಜಿ ಸಲ್ಲಿಸಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ. ಈ ಹಿಂದೆ ಸುನ್ನಿ ವಕ್ಫ್ ಬೋರ್ಡ್​, ನ್ಯಾಯಾಲಯದ ತೀರ್ಪನ್ನ ಪ್ರಶ್ನಿಸಲು ಹೋಗುವುದಿಲ್ಲ ಎಂದಿತ್ತು. ಆದರೆ, ಈವರೆಗೆ ಭೂಮಿ ಸ್ವೀಕರಿಸುವ ಬಗ್ಗೆ ತಮ್ಮ ನಿರ್ಧಾರ ಪ್ರಕಟ ಮಾಡಿಲ್ಲ.

ABOUT THE AUTHOR

...view details