ಮೀರತ್/ ಉತ್ತರ ಪ್ರದೇಶ: ದೇಶದಲ್ಲಿ ವೈಯಕ್ತಿಕ ಮತ್ತು ರಾಜಕೀಯ ಹಿತಾಸಕ್ತಿಗಳಿಗಾಗಿ ಕೆಲವರು ಧರ್ಮಗಳ ಹೆಸರಿನಲ್ಲಿ ಶಾಂತಿ ಸಾಮರಸ್ಯವನ್ನು ಕದಡುತ್ತಿರುವ ಸನ್ನಿವೇಶದಲ್ಲಿ, ಮೀರತ್‌ನ ಮುಸ್ಲಿಂ ಕುಟುಂಬವೊಂದು ತಮ್ಮ ಖಾಸಗಿ ಭೂಮಿಯನ್ನು ಹಿಂದೂ ದೇವಾಲಯ ನಿರ್ಮಿಸಲು ದಾನ ಮಾಡಿ ಕೋಮು ಸೌಹಾರ್ದತೆ ಮೆರೆದಿದೆ.
ಸಾಮಾಜಿಕ ಸಾಮರಸ್ಯ: ಹಿಂದೂ ದೇವಾಲಯ ನಿರ್ಮಾಣಕ್ಕೆ ಮುಸ್ಲಿಂ ಕುಟುಂಬದಿಂದ ಭೂಮಿ ದಾನ!
ಉತ್ತರ ಪ್ರದೇಶ ರಾಜ್ಯದ ಮೀರತ್‌ನಲ್ಲಿರುವ ಮುಸ್ಲಿಂ ಕುಟುಂಬವೊಂದು ಹಿಂದೂ ದೇವಾಲಯ ನಿರ್ಮಿಸಲು ತಮ್ಮ ಸ್ವಂತ ಭೂಮಿಯನ್ನು ದಾನ ಮಾಡುವ ಮೂಲಕ ಏಕತೆ ಮತ್ತು ಸಾಮಾಜಿಕ ಸಾಮರಸ್ಯ ಮೆರೆದಿದೆ.
ಈ ಹಿಂದೆ 1976 ರಲ್ಲಿ ಬ್ರಹ್ಮಪುರಿ ಪ್ರದೇಶದಲ್ಲಿನ 1800 ಅಡಿಯಷ್ಟು ಜಾಗವನ್ನು ಶಿವ ಮಂದಿರ ನಿರ್ಮಾಣಕ್ಕೆ ದಾನ ಮಾಡಲಾಗಿತ್ತು. ಈಗ ಅದೇ ಕುಟುಂಬದ ಅಸಿಮ್ ಅಲಿ ಎಂಬುವರು ಮಂದಿರ ಸಮಿತಿಯ ಹೆಸರಿನಲ್ಲಿ ಭೂಮಿಯನ್ನು ನೋಂದಾಯಿಸಿದ್ದಾರೆ.
ನಮ್ಮಲ್ಲಿ ಮೊದಲಿದ್ದ ಪ್ರೀತಿ ಪರಸ್ಪರ ಸಾಮರಸ್ಯ ಮತ್ತು ಪ್ರೀತಿ ಇಂದಿಗೂ ಇದೆ ಎಂದು ಭೂಮಿಯನ್ನು ದಾನ ಮಾಡಿದ ಕುಟುಂಬ ಹೇಳುತ್ತದೆ. ದೇಶದಲ್ಲಿ ದೇವಾಲಯ ಅಥವಾ ಮಸೀದಿ ನಿರ್ಮಿಸಲು ಎಲ್ಲಾ ಧರ್ಮದ ಜನರು ಮುಂದೆ ಬರಬೇಕು ಎಂದು ಕರೆ ನೀಡಿದರು. ಇಂತಹ ಕ್ರಮಗಳು ಹಿಂದೂ-ಮುಸ್ಲಿಂರ ನಡುವಿನ ಪರಸ್ಪರ ಐಕ್ಯತೆಯನ್ನು ಮತ್ತಷ್ಟು ಬಲಪಡಿಸುತ್ತದೆ.
TAGGED:
communal brotherhood