ಪಣಜಿ: ಮುಸ್ಲಿಮರು ಇಫ್ತಾರ್ ಕೂಟಗಳನ್ನು ಆಯೋಜಿಸಬೇಡಿ, ಬದಲಾಗಿ ಕೊರೊನಾ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಆರೋಗ್ಯ ಸಿಬ್ಬಂದಿ, ಪೊಲೀಸರು ಸೇರಿದಂತೆ ಕೊರೊನಾ ವಾರಿಯರ್ಸ್ಗಾಗಿ ಪ್ರಾರ್ಥಿಸಿ ಎಂದು ಗೋವಾ ಮುಸ್ಲಿಂ ಜಮಾತ್‌ಗಳ ಸಂಘಟನೆ ತಿಳಿಸಿದೆ.
ರಂಜಾನ್ಗೂ ಮೊದಲು ಕೆಲ ಸಲಹೆಯನ್ನು ಹೊರಡಿಸಿರುವ ಮುಸ್ಲಿಂ ಜಮಾತ್‌ಗಳ ಸಂಘಟನೆ ಲಾಕ್‌ಡೌನ್‌ಗೆ ಸಂಬಂಧಿಸಿದಂತೆ ಸರ್ಕಾರದ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಮನೆಯಿಂದ ಹೊರ ಬಾರದೆ, ಸಾಮಾಜಿಕ ಅಂತರವನ್ನು ಅನುಸರಿಸಬೇಕು ಎಂದು ಸಮುದಾಯದ ಜನರನ್ನು ಒತ್ತಾಯಿಸಿದೆ.