ಕರ್ನಾಟಕ

karnataka

ETV Bharat / bharat

ಕೇವಲ 2 ರೂಪಾಯಿಗಾಗಿ ಕೊಲೆ... ಸ್ನೇಹಿತನಿಗಾಗಿ ಯುವಕನ ಪ್ರಾಣವನ್ನೇ ತೆಗೆದ ವ್ಯಕ್ತಿ! - ಕಾಕಿನಾಡ ಎರಡು ರೂಪಾಯಿ ಕೊಲೆ ಸುದ್ದಿ

ಕೇವಲ ಎರಡು ರೂಪಾಯಿಗೆ ವ್ಯಕ್ತಿಯೊಬ್ಬನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಆಂಧ್ರ ಪ್ರದೇಶವನ್ನು ಬೆಚ್ಚಿಬೀಳಿಸಿದೆ.

ಎರಡು ರೂಪಾಯಿಗಾಗಿ ಕೊಲೆ

By

Published : Nov 10, 2019, 1:42 PM IST

ಪೂರ್ವ ಗೋದಾವರಿ:ಕೇವಲ ಎರಡು ರೂಪಾಯಿಗಾಗಿ ನಡೆದ ಕಲಹದಲ್ಲಿ ವ್ಯಕ್ತಿಯೊಬ್ಬ ತನ್ನ ಪ್ರಾಣವನ್ನೇ ಕಳೆದುಕೊಂಡಿರುವ ಘಟನೆ ಪೂರ್ವ ಗೋದಾವರಿ ಜಿಲ್ಲೆಯ ಕಾಕಿನಾಡ ತಾಲೂಕಿನ ವಲಸಪಾಕ ಗ್ರಾಮದಲ್ಲಿ ನಡೆದಿದೆ.

ಎರಡು ರೂಪಾಯಿಗಾಗಿ ಕೊಲೆ

24 ವರ್ಷದ ಸುವರ್ಣರಾಜು ಎಂಬಾತ ಸೈಕಲ್​ ಗಾಲಿಗೆ ಗಾಳಿ ಹಾಕಿಸಲು ಸಾಂಬ ಶಾಪ್​ಗೆ ತೆರಳಿದ್ದಾನೆ. ಸೈಕಲ್​ ಗಾಲಿಗೆ ಗಾಳಿ ಹಾಕಿದ ಬಳಿಕ ಸಾಂಬ ಎರಡು ರೂಪಾಯಿ ನೀಡುವಂತೆ ಸುವರ್ಣರಾಜುವಿಗೆ ಕೇಳಿದ್ದಾನೆ. ಹಣ ನೀಡದ ಹಿನ್ನೆಲೆ ಸುವರ್ಣರಾಜು ಮತ್ತು ಸಾಂಬ ಮಧ್ಯೆ ಘರ್ಷಣೆ ನಡೆದಿದೆ. ಸುವರ್ಣರಾಜು ಸೈಕಲ್​ ಶಾಪ್​ ಮಾಲೀಕನಾದ ಸಾಂಬಗೆ ಹೊಡೆದಿದ್ದಾನೆ. ಅದೇ ವೇಳೆ ಸಾಂಬ ಸ್ನೇಹಿತ ಅಪ್ಪಾರಾವು ಅಲ್ಲೇ ಇದ್ದ.

ಸಾಂಬಗೆ ಹೊಡೆಯುತ್ತಿರುವುದನ್ನು ಸಹಿಸದ ಸ್ನೇಹಿತ ಅಪ್ಪಾರಾವು ಸಹಾಯಕ್ಕೆ ದೌಡಾಯಿಸಿದ್ದಾನೆ. ಅಲ್ಲೇ ಬಿದ್ದಿದ್ದ ರಾಡ್​ನಿಂದ ಸುವರ್ಣರಾವುಗೆ ಅಪ್ಪಾರಾವು ಮನಬಂದಂತೆ ಹಲ್ಲೆ ಮಾಡಿದ್ದಾನೆ. ಅಪ್ಪಾರಾವು ಹೊಡೆತಕ್ಕೆ ಸುವರ್ಣರಾವು ಮೂರ್ಛೆ ಬಿದ್ದಿದ್ದ. ಇದನ್ನು ಗಮನಿಸಿದ ಸ್ಥಳೀಯರು ಕೂಡಲೇ ಆತನನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದ್ರೆ ಚಿಕಿತ್ಸೆ ಫಲಿಸದೆ ಸುವರ್ಣರಾವು ಸಾವನ್ನಪ್ಪಿದ್ದಾನೆ. ಕೇವಲ ಎರಡು ರೂಪಾಯಿಯಿಂದ ನಡೆದ ಜಗಳ ಕೊಲೆಯಲ್ಲಿ ಅಂತ್ಯ ಕಂಡಿದೆ. ಈ ಘಟನೆ ಕುರಿತು ಸರ್ಪವರಂ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ.

ABOUT THE AUTHOR

...view details