ಲಖನೌ( ಉತ್ತರ ಪ್ರದೇಶ): ಕಾಸ್ಗಂಜ್ ಜಿಲ್ಲೆಯ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯರ ವೇಷದಲ್ಲಿ ಬಂದ ಕೆಲವರು, ಆಸ್ಪತ್ರೆಯ ಐಸಿಯುನಲ್ಲಿ ದಾಖಲಾಗಿದ್ದ ರೋಗಿಯೊಬ್ಬನಿಗೆ ವಿಷಕಾರಿ ಚುಚ್ಚುಮದ್ದನ್ನು ಚುಚ್ಚಿ ಕೊಲ್ಲಲು ಪ್ರಯತ್ನಿಸಿದ ವಿದ್ಯಮಾನ ಜರುಗಿದೆ.
ಆಸ್ಪತ್ರೆಯಲ್ಲಿ ವಿಷಕಾರಿ ಚುಚ್ಚುಮದ್ದು ಚುಚ್ಚಿ ಹತ್ಯೆಗೆ ಯತ್ನ!
ಆಸ್ಪತ್ರೆಗೆ ವೈದ್ಯರ ವೇಷದಲ್ಲಿ ಬಂದವರು ಐಸಿಯುನಲ್ಲಿ ದಾಖಲಾಗಿದ್ದ ರೋಗಿಗೆ ವಿಷಕಾರಿ ಚುಚ್ಚುಮದ್ದನ್ನು ಚುಚ್ಚಿ ಕೊಲ್ಲಲು ಪ್ರಯತ್ನಿಸಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
hospital
ಆದರೆ, ವೈದ್ಯಕೀಯ ಸಿಬ್ಬಂದಿಯ ಎಚ್ಚರಿಕೆಯಿಂದ ಇಬ್ಬರು ಸಿಕ್ಕಿಬಿದ್ದಿದ್ದು, ಉಳಿದವರು ತಪ್ಪಿಸಿಕೊಂಡದ್ದಾರೆ. ಬಂಧಿತ ಇಬ್ಬರ ಜೇಬಿನಿಂದ ಪೊಲೀಸರು ವಿಷಕಾರಿ ಚುಚ್ಚುಮದ್ದನ್ನು ವಶಪಡಿಸಿಕೊಂಡಿದ್ದಾರೆ. ಐದು ಜನರ ವಿರುದ್ಧ ಈಗ ಪ್ರಕರಣ ದಾಖಲಿಸಲಾಗಿದೆ.
ಬಂಧಿತರನ್ನು ಪ್ರಮೋದ್ ಮತ್ತು ಶಂತನು ಚೌಧರಿ ಎಂದು ಗುರುತಿಸಲಾಗಿದೆ. ಹರಿಯಮ್ ಚೌಧರಿ ಮತ್ತು ಅರುಣ್ ಕುಮಾರ್ ಅಲಿಯಾಸ್ ರವಿ ಸೇರಿದಂತೆ ಇನ್ನೊಬ್ಬ ವ್ಯಕ್ತಿ ಪರಾರಿಯಾಗಿದ್ದಾರೆ.