ರಾಜಸ್ಥಾನ: ಜೈಪುರ ನಗರಸಭೆಯ ಕಾರ್ಯ ವೈಖರಿಯಿಂದ ನಗರದ ನಿವಾಸಿಗಳು ಮಾತ್ರವಲ್ಲದೆ, ಪ್ರಾಣಿಗಳು ತೊಂದರೆಗೀಡಾಗುತ್ತಿವೆ. ನಗರದಲ್ಲಿ ಸೆರೆ ಹಿಡಿಯಲಾಗಿದ್ದ ಕೋತಿಗಳನ್ನು, ಕಳೆದ ಏಳು ದಿನಗಳಿಂದ ಪಂಜರದಲ್ಲಿ ಬಂಧಿಸಿ ಕಾನೂನು ಉಲ್ಲಂಘನೆ ಮಾಡಲಾಗಿದೆ.
ಈ ಸುದ್ದಿ ತಿಳಿದ ಕೆಲ ಸಾಮಾಜಿಕ ಕಾರ್ಯಕರ್ತರು ಪಂಜರದಲ್ಲಿ ಕುಳಿತು ಪ್ರತಿಭಟನೆ ನಡೆಸಿದ್ದಾರೆ. ಬಳಿಕ ನಿಗಮ ಮತ್ತು ಅರಣ್ಯ ಇಲಾಖೆ ತಂಡ ಕೋತಿಗಳನ್ನು ಬಿಡುಗಡೆಗೊಳಿಸಿ, ಗಾಲ್ಟಾ ಕಣಿವೆಯಲ್ಲಿ ಬಿಟ್ಟು ಬಂದಿದೆ.
ಜೈಪುರದಲ್ಲಿ ಕೋತಿಗಳಿಗೆ ಪಂಜರದಲ್ಲಿ ದಿಗ್ಬಂಧನ ಜೈಪುರ ನಗರ ಪಾಲಿಕೆಯ ಸೂಚನೆಯ ಮೇರೆಗೆ, ಕೋತಿಗಳನ್ನು ಸೆರೆಹಿಡಿಯುವ ಕೆಲಸವನ್ನು ಗುತ್ತಿಗೆದಾರ ತಂಡ ನಡೆಸುತ್ತಿದೆ. ಆದರೆ ಅಧಿಕಾರಿಗಳೊಂದಿಗೆ ಹೊಂದಾಣಿಕೆ ಕೊರತೆ ಮತ್ತು ಗುತ್ತಿಗೆದಾರರ ನಡುವಿನ ಪರಸ್ಪರ ವಿವಾದದಿಂದ, ಕಳೆದ ಒಂದು ವಾರದಿಂದ ಸಿಕ್ಕಿಬಿದ್ದ ಕೋತಿಗಳನ್ನು ಪಂಜರದಲ್ಲಿ ಬಂಧಿಸಲಾಗಿತ್ತು.
ವನ್ಯಜೀವಿ ಕಾಯ್ದೆ 1972 ರ ಪ್ರಕಾರ, ಇದು ಕಾನೂನು ಅಪರಾಧವಾಗಿದೆ. ಈ ಕಾಯಿದೆಯಡಿ ಯಾವುದೇ ವನ್ಯಜೀವಿಗಳನ್ನು 24 ಗಂಟೆಗಳಿಗಿಂತ ಹೆಚ್ಚು ಕಾಲ ಪಂಜರದಲ್ಲಿ ಇಡಬಾರದು. ಆದರೆ ಕಾನೂನು ಉಲ್ಲಂಘಿಸಿ, ನಗರಸಭೆ ಆಡಳಿತವು ಕೋತಿಗಳನ್ನು ಘಾಟ್‌ಗೇಟ್‌ನಲ್ಲಿ ಪಂಜರದಲ್ಲಿ ಕೂಡಿ ಹಾಕಿತ್ತು.
ಈ ಸುದ್ದಿ ತಿಳಿದ 'ಪೀಪಲ್ ಫಾರ್ ಎನಿಮಲ್ಸ್' ಸಂಘಟನೆಯ ಕಾರ್ಯಕರ್ತರು ಸ್ಥಳಕ್ಕೆ ಭೇಟಿ ನೀಡಿ, ಕೋತಿಗಳನ್ನು ಬಿಡುಗಡೆ ಮಾಡುವವವರೆಗೂ ಖಾಲಿ ಪಂಜರಗಳೊಳಗೆ ಬೀಗ ಹಾಕಿ ಕುಳಿತಿದ್ದರು.