ಮುಂಬೈ:33 ವರ್ಷದ ಮಹಿಳೆಯೊಬ್ಬಳು ನಿದ್ರೆಯಲ್ಲಿದ್ದ ಪತಿಯನ್ನು ಚಾಕುವಿನಿಂದ 11 ಸಲ ಇರಿದು ಹತ್ಯೆಗೈದಿರುವ ಪ್ರಕರಣ ಮಹಾರಾಷ್ಟ್ರದ ನಲ್ಲಸೋಪರ್ದಲ್ಲಿ ನಡೆದಿದೆ. ಘಟನೆಯ ನಂತರ ಆತ ಖುದ್ದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರ ಮುಂದೆ ಸುಳ್ಳು ಹೇಳಿಕೆ ನೀಡಿದ್ದಾಳೆ.
ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಗಂಡ ಸುನೀಲ್ ಕದಂ ಹಾಗೂ ಪತ್ನಿ ಪ್ರಾಣಾಲಿ ಕಳೆದ (ಬುಧವಾರ) ರಾತ್ರಿ ಪರಸ್ಪರ ಕಿತ್ತಾಡಿಕೊಂಡಿದ್ದಾರೆ. ಇದಾದ ಬಳಿಕ ಗಂಡ ನಿದ್ದೆಗೆ ಜಾರಿದ್ದಾನೆ. ಈ ಸಂದರ್ಭ ಅಡುಗೆ ಮನೆಗೆ ತೆರಳಿರುವ ಪತ್ನಿ, ಚಾಕುವಿನಿಂದ ಗಂಡನ ಹೊಟ್ಟೆ ಹಾಗೂ ಕುತ್ತಿಗೆಗೆ 11 ಸಲ ಇರಿದಿದ್ದಾಳೆ. ಈ ವೇಳೆ ತೀವ್ರ ರಕ್ತಸ್ರಾವವಾಗಿ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.