ಕರ್ನಾಟಕ

karnataka

ETV Bharat / bharat

ಸಹೋದರಿ ಸ್ನಾನ ಮಾಡುತ್ತಿದ್ದ ವಿಡಿಯೋ ತೆಗೆದು ಬಾಯ್‌ಫ್ರೆಂಡ್‌ಗೆ ಕಳುಹಿಸಿದ ಯುವತಿ ಅರೆಸ್ಟ್ - ಪೊಲೀಸರಿಂದ ಬಂಧನ

ಮದುವೆಯಾಗುವ ಆಸೆ ಹುಟ್ಟಿಸಿ ಗೆಳತಿ​ ಹತ್ತಿರ ಆಕೆಯ ಸಹೋದರಿಯ ಅಶ್ಲೀಲ ವಿಡಿಯೋ ಶೇರ್​ ಮಾಡಿಸಿಕೊಂಡಿರುವ ಘಟನೆ ನಡೆದಿದೆ.

ಸಾಂದರ್ಭಿಕ ಚಿತ್ರ

By

Published : Nov 1, 2019, 7:09 PM IST

ಮುಂಬೈ:ಮದುವೆಯಾಗುವ ಆಸೆ ಹುಟ್ಟಿಸಿ ಗೆಳತಿ​ ಹತ್ತಿರ ಆಕೆಯ ಸಹೋದರಿಯ ಅಶ್ಲೀಲ ವಿಡಿಯೋ ಶೇರ್​ ಮಾಡಿಸಿಕೊಂಡಿರುವ ಘಟನೆ ಮಹಾರಾಷ್ಟ್ರದ ಅಗ್ರಿಪಾಡಾ ಪ್ರದೇಶದಲ್ಲಿ ನಡೆದಿದೆ.

25 ವರ್ಷದ ಯುವತಿ ತನ್ನ 20 ವರ್ಷದ ಸಹೋದರಿಯ ಅಶ್ಲೀಲ ವಿಡಿಯೋ ಚಿತ್ರೀಕರಣ ಮಾಡಿರುವುದಕ್ಕಾಗಿ ಇದೀಗ ಅರೆಸ್ಟ್ ಆಗಿದ್ದಾಳೆ.

ಘಟನೆ ನಡೆದಿದ್ದು ಹೇಗೆ?
ಕಳೆದೆರಡು ದಿನಗಳ ಹಿಂದೆ ಯುವತಿಯ ಸಹೋದರಿ ಸ್ನಾನ ಮಾಡುತ್ತಿದ್ದಾಗ ಬಾಯ್​ಫ್ರೆಂಡ್​ಗೆ ವಿಡಿಯೋ ಕಾಲ್​ ಮಾಡಿ ಸಹೋದರಿಯ ನಗ್ನ ವಿಡಿಯೋ ತೋರಿಸಿದ್ದಾಳೆ. ಈ ವೇಳೆ ಅದರ ಫೋಟೋ ಕ್ಲಿಕ್ಕಿಸಿಕೊಂಡಿರುವ ಯುವಕ ಅದನ್ನು ಹುಡುಗಿ ಸಂಬಂಧಿಕರಿಗೆ ಶೇರ್​ ಮಾಡಿದ್ದಾನೆ.

ಈ ವಿಚಾರ ಗೊತ್ತಾದ ಬಳಿಕ ಸಹೋದರಿ ತಕ್ಷಣವೇ ಪೊಲೀಸ್​ ಠಾಣೆಗೆ ತೆರಳಿ ದೂರು ನೀಡಿದ್ದು ಯುವತಿಯನ್ನು ಬಂಧಿಸಲಾಗಿದೆ. ತಲೆ ಮರೆಸಿಕೊಂಡಿರುವ ವ್ಯಕ್ತಿಗಾಗಿ ಶೋಧಕಾರ್ಯ ನಡೆಯುತ್ತಿದೆ.

ABOUT THE AUTHOR

...view details