ಮುಂಬೈ(ಮಹಾರಾಷ್ಟ್ರ): ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ನಿನ್ನೆ ನಡೆದ ಹಿಂಸಾಚಾರವನ್ನು ಖಂಡಿಸಿ, ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಗೇಟ್ವೇ ಆಫ್ ಇಂಡಿಯಾ ಬಳಿ ಪ್ರತಿಭಟನೆ ನಡೆಸುತ್ತಿದ್ದಾರೆ.
JNU ಹಿಂಸಾಚಾರ ಖಂಡಿಸಿ ಗೇಟ್ವೇ ಆಫ್ ಇಂಡಿಯಾ ಎದುರು ಪ್ರತಿಭಟನೆ - ಜೆ.ಎನ್.ಯು ವಿಶ್ವವಿದ್ಯಾಲಯದಲ್ಲಿ ಭಾನುವಾರ ನಡೆದ ಹಿಂಸಾಚಾರ
ಜೆ.ಎನ್.ಯು ವಿಶ್ವವಿದ್ಯಾಲಯದಲ್ಲಿ ಭಾನುವಾರ ನಡೆದ ಹಿಂಸಾಚಾರ ಖಂಡಿಸಿ ವಿವಿದ ಕಾಲೇಜು ವಿದ್ಯಾರ್ಥಿಗಳು ಗೇಟ್ವೇ ಆಫ್ ಇಂಡಿಯಾ ಬಳಿ ಪ್ರತಿಭಟನೆ ಕೈಗೊಂಡರು
![JNU ಹಿಂಸಾಚಾರ ಖಂಡಿಸಿ ಗೇಟ್ವೇ ಆಫ್ ಇಂಡಿಯಾ ಎದುರು ಪ್ರತಿಭಟನೆ protest](https://etvbharatimages.akamaized.net/etvbharat/prod-images/768-512-5607935-thumbnail-3x2-vicky.jpg)
ಪ್ರತಿಭಟನಾನಿರತ ವಿದ್ಯಾರ್ಥಿಗಳು
ಭಾನುವಾರ ರಾತ್ರಿ ವಿಶ್ವವಿದ್ಯಾಲಯದಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು, ಮಾಸ್ಕ್ ಧರಿಸಿದ್ದ ದುಷ್ಕರ್ಮಿಗಳ ಗುಂಪೊಂದು ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿ ಕಾಲೇಜಿನ ಆಸ್ತಿ ಪಾಸ್ತಿಗಳೆಲ್ಲವನ್ನೂ ಹಾಳು ಮಾಡಿದ್ದರು. ಈ ಹಿಂಸಾಚಾರದಲ್ಲಿ 25ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಪ್ರತಿಭಟನಾನಿರತ ವಿದ್ಯಾರ್ಥಿಗಳು
ಈ ಗಲಬೆಯಲ್ಲಿ ಜೆ.ಎನ್.ಯು ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿ ಸಂಘದ ಅಧ್ಯಕ್ಷ ಐಷೆ ಘೋಷ್ ಗಾಯಗೊಂಡಿದ್ದು, ಈ ಕೃತ್ಯ ನಡೆಸಿದವರು ಅಪರಿಚಿತ ಎಬಿವಿಪಿಯ ಗೂಂಡಾಗಳು ಎಂದು ಕಿಡಿಕಾರಿದ್ದಾರೆ.
Last Updated : Jan 6, 2020, 9:44 AM IST
TAGGED:
JNU