ಕರ್ನಾಟಕ

karnataka

ETV Bharat / bharat

ನೀವು 55 ವರ್ಷಕ್ಕಿಂತ ಮೇಲ್ಪಟ್ಟವರಾ?.. ರಜೆ ತೆಗೆದುಕೊಳ್ಳಿ: ಹಿರಿಯ ಪೊಲೀಸರಿಗೆ ಅಧಿಕಾರಿಗಳ ಸೂಚನೆ

ಕೊರೊನಾ ವೈರಸ್​ ವಿರುದ್ಧ ಜನ ಜಾಗೃತಿ ಮೂಡಿಸುವಲ್ಲಿ ಹಾಗೂ ಸಾರ್ವಜನಿಕರನ್ನು ನಿಯಂತ್ರಿಸಲು ಪೊಲೀಸ್​ ಇಲಾಖೆ ಹಗಲು-ಇರುಳು ಶ್ರಮಿಸುತ್ತಿದ್ದು, ಇದೀಗ ಈ ಇಲಾಖೆಯ ಸಿಬ್ಬಂದಿಗಳಿಗೂ ಸಹ ಕೊರೊನಾ ಭಯ ಹುಟ್ಟಿಸಿದೆ. ಆದ್ದರಿಂದ 55 ವರ್ಷದ ಮೇಲ್ಪಟ್ಟ ಪೊಲೀಸರಿಗೆ ರಜೆ ತೆಗೆದುಕೊಳ್ಳುವಂತೆ ಇಲಾಖೆ ಸೂಚನೆ ನೀಡಿದೆ.

Mumbai Police
ಪೊಲೀಸ್​ ಇಲಾಖೆ

By

Published : Apr 28, 2020, 6:28 PM IST

ಮುಂಬೈ (ಮಹಾರಾಷ್ಟ್ರ): ಕೊರೊನಾ ವೈರಸ್ ಸೋಂಕಿನಿಂದ ತಮ್ಮ ಸಿಬ್ಬಂದಿ ರಕ್ಷಿಸಿಕೊಳ್ಳುವ ಉದ್ದೇಶದಿಂದ ಮುಂಬೈ ಪೊಲೀಸ್​ ಇಲಾಖೆ​ 55 ವರ್ಷಕ್ಕಿಂತ ಮೇಲ್ಪಟ್ಟ ಹಾಗೂ ಈ ಮೊದಲೇ ಯಾವುದಾದರೂ ಕಾಯಿಲೆಗಳಿಂದ ಬಳುತ್ತಿರುವ ತಮ್ಮ ಸಿಬ್ಬಂದಿಗಳು ಕರ್ತವ್ಯಕ್ಕೆ ರಜೆ ಸಲ್ಲಿಸಿ ತೆರಳುವಂತೆ ಕೇಳಿಕೊಂಡಿದ್ದಾರೆ.

ಕಳೆದ ಮೂರು ದಿನಗಳಲ್ಲಿ ಕೋವಿಡ್​​-19, ಮೂವರು ಮುಂಬೈ ಪೊಲೀಸ್ ಸಿಬ್ಬಂದಿಯ ಪ್ರಾಣ ಪಡೆದುಕೊಂಡ ಹಿನ್ನೆಲೆ, ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸ್​ ಇಲಾಖೆ ಸ್ಪಷ್ಟಪಡಿಸಿದೆ.

ಕೊರೊನಾ ವೈರಸ್​​ಗೆ ಮೃತ ಪಟ್ಟ ಮೂವರು ಹಾಗೂ ಪ್ರಸ್ತುತ ಈ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿರುವ ಇತರ ಪೊಲೀಸ್ ಸಿಬ್ಬಂದಿ, 50 ವರ್ಷಕ್ಕಿಂತ ಮೇಲ್ಪಟ್ಟವರು ಎಂದು ತಿಳಿದು ಬಂದಿದೆ ಎಂದು ಮುಂಬೈ ಪೊಲೀಸ್ ಹಿರಿಯ ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.

ಇದನ್ನು ಗಮನದಲ್ಲಿಟ್ಟುಕೊಂಡು, ನಮ್ಮ ಪೊಲೀಸರು ಮತ್ತು ಅಧಿಕಾರಿಗಳನ್ನು ರಕ್ಷಿಸಲು ನಾವು ನಿರ್ಧರಿಸಿದ್ದೇವೆ. 55 ವರ್ಷಕ್ಕಿಂತ ಮೇಲ್ಪಟ್ಟವರು ಮತ್ತು ಈ ಮೊದಲೇ ಕೆಲವು ಕಾಯಿಲೆಗಳಿಂದ ಬಳಲುತ್ತಿರುವವರು, ಈ ಕೂಡಲೇ ರಜೆ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.

ಇಳಿ ವಯಸ್ಸಿನ ಪೊಲೀಸ್ ಸಿಬ್ಬಂದಿ ಹೆಚ್ಚಿನ ಅಪಾಯದಲ್ಲಿದ್ದಾರೆ. ಆದ್ದರಿಂದ, ಈ ದಿನಗಳಲ್ಲಿ ನಾವು ಅವರಿಗೆ ರಜೆ ನೀಡದೇ ಹೋದರೆ, ಅವರ ಪ್ರಾಣಕ್ಕೆ ಕುತ್ತು ಬರಲಿದೆ. ಆದ್ದರಿಂದ ಪೊಲೀಸ್​ ಇಲಾಖೆ ಈ ಕ್ರಮ ಕೈಗೊಂಡಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಇಲ್ಲಿಯವರೆಗೆ, 20 ಅಧಿಕಾರಿಗಳು ಸೇರಿದಂತೆ 107 ಪೊಲೀಸ್ ಸಿಬ್ಬಂದಿಗಳಿಗೆ ಕೊರೊನಾ ವೈರಸ್ ಧನಾತ್ಮಕ ಪರೀಕ್ಷೆ ನಡೆಸಲಾಗಿದ್ದು, ಇದರಲ್ಲಿ ಹೆಚ್ಚಿನವರು ಮುಂಬೈ ಪೊಲೀಸ್ ಪಡೆಯಿಂದ ಬಂದವರು ಎಂದು ತಿಳಿದುಬಂದಿದೆ.

ಸೋಮವಾರದಂದು ಮುಂಬೈನ 57 ವರ್ಷದ ಹೆಡ್ ಕಾನ್‌ಸ್ಟೆಬಲ್, 52 ವರ್ಷದ ಹೆಡ್ ಕಾನ್‌ಸ್ಟೆಬಲ್ ಸೇರಿದಂತೆ 57 ವರ್ಷದ ಕಾನ್‌ಸ್ಟೆಬಲ್​ಗಳು ಈ ಮಹಾಮಾರಿಗೆ ಜೀವ ತೆತ್ತಿದ್ದಾರೆ.

ABOUT THE AUTHOR

...view details