ಮುಂಬೈ:ಲಾಕ್ಡೌನ್ ಸಮಯದಲ್ಲಿ ಜನರು ತಮ್ಮ ಮನೆಗಳಿಂದ ಹೊರ ಬರದಂತೆ ಎಚ್ಚರಿಸುವ ಉದ್ದೇಶದಿಂದ ಮುಂಬೈ ಪೊಲೀಸರು ರಣವೀರ್ ಸಿಂಗ್ ಮತ್ತು ಆಲಿಯಾ ಭಟ್ ಅಭಿನಯದ ಗಲ್ಲಿ ಬಾಯ್ ಚಿತ್ರದ ಪೋಸ್ಟರ್ನ್ನು ಹಂಚಿಕೊಂಡಿದ್ದಾರೆ.
ಗಲ್ಲಿ ಬಾಯ್ ಚಿತ್ರದಲ್ಲಿ ಆಲಿಯಾ ನಗುತ್ತಿರುವ ಚಿತ್ರವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿರುವ ಪೊಲೀಸರು, 'ಲಾಕ್ಡೌನ್ ಸಮಯದಲ್ಲಿ ವಾಕ್ ಮಾಡಲು ಹೋಗುತ್ತೇನೆಂದು ಅವನು ಹೇಳಿದಾಗ ಆ ನಗು' ಎಂದು ಉಲ್ಲೇಖಿಸಿ ಬರೆದುಕೊಂಡಿದ್ದಾರೆ.
ಮುಂಬೈ ಪೊಲೀಸರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಾಕಿದ ಶೀರ್ಷಿಕೆ ಇನ್ನಷ್ಟು ತಮಾಷೆಯಾಗಿದ್ದು, ಅಬಾರ್ಟ್ ಮಿಷನ್. ವಿ ರಿಪೀಟ್, ಅಬಾರ್ಟ್ ಮಿಷನ್! # ಸ್ಟೇಹೋಮ್ # ಸ್ಟೇ ಸೇಫ್ ಎಂದು ಬರೆದುಕೊಂಡಿದ್ದಾರೆ.