ಕರ್ನಾಟಕ

karnataka

ETV Bharat / bharat

ಬಾಂಬ್​ ಬೆದರಿಕೆ ಕರೆ: 'ಎಂ​​ಎಲ್​ಎ ಹಾಸ್ಟೆಲ್‌'ನಿಂದ ಜನರ ಸ್ಥಳಾಂತರ - 'ಎಮ್​​ಎಲ್​ಎ ಹಾಸ್ಟೆಲ್

ಬಾಂಬ್ ಬೆದರಿಕೆ ಕರೆ ಹಿನ್ನೆಲೆಯಲ್ಲಿ ಮುಂಬೈ ಪೊಲೀಸರು ನಿನ್ನೆ ಮಂತ್ರಾಲಯ ಬಳಿಯ 'ಎಂ​​ಎಲ್​ಎ ಹಾಸ್ಟೆಲ್‌'ನಿಂದ ಜನರನ್ನು ಸ್ಥಳಾಂತರಿಸಿದ್ದಾರೆ.

Mumbai MLA hostel evacuated following 'bomb threat'
ಬಾಂಬ್​ ಬೆದರಿಕೆ ಕರೆ: 'ಎಮ್​​ಎಲ್​ಎ ಹಾಸ್ಟೆಲ್‌' ನಿಂದ ಜನರ ಸ್ಥಳಾಂತರ

By

Published : Sep 29, 2020, 8:20 AM IST

ಮುಂಬೈ (ಮಹಾರಾಷ್ಟ್ರ): ಬಾಂಬ್ ಬೆದರಿಕೆ ಕರೆ ಹಿನ್ನೆಲೆಯಲ್ಲಿ ಮುಂಬೈ ಪೊಲೀಸರು ನಿನ್ನೆ ಮಂತ್ರಾಲಯ ಬಳಿಯ 'ಎಂ​​ಎಲ್​ಎ ಹಾಸ್ಟೆಲ್‌'ನಿಂದ ಜನರನ್ನು ಸ್ಥಳಾಂತರಿಸಿದ್ದಾರೆ. ಆದರೆ ಹೋಟೆಲ್​​ನಲ್ಲಿ ಯಾವುದೇ ಸ್ಫೋಟಕ ವಸ್ತುಗಳು ಪೊಲೀಸರಿಗೆ ಸಿಕ್ಕಿಲ್ಲ.

ಕಟ್ಟಡದಲ್ಲಿ ಸುಮಾರು 150 ಜನರಿದ್ದರು. ನಾವು ಕೂಲಂಕಷವಾಗಿ ಪರಿಶೀಲಿಸಿದ್ದು, ಯಾವುದೇ ಸ್ಫೋಟಕ ವಸ್ತುಗಳು ಪತ್ತೆಯಾಗಿಲ್ಲ. ದೂರವಾಣಿ ಸಂಖ್ಯೆಯನ್ನು ಟ್ರೇಸ್​​ ಮಾಡಲಾಗಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗುವುದೆಂದು ಪೊಲೀಸರು ತಿಳಿಸಿದ್ದಾರೆ.

ಈ ತಿಂಗಳ ಆರಂಭದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ಅವರ ಅವರ ವೈಯಕ್ತಿಕ ನಿವಾಸಕ್ಕೆ ಅಂದರೆ ಮುಂಬೈನ ಬಾಂದ್ರಾದಲ್ಲಿರುವ 'ಮಾತೋಶ್ರೀ'ಗೆ ಕರೆಗಳು ಬಂದಿದ್ದವು. ಕರೆ ಮಾಡಿದವರು ಬಾಂಬ್​ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದರು.

ಪೊಲೀಸರ ಪ್ರಕಾರ, ಸೆಪ್ಟೆಂಬರ್ 6ರಂದು 'ಮಾತೋಶ್ರೀ'ಗೆ ಒಬ್ಬ ವ್ಯಕ್ತಿಯಿಂದ 2 ಕರೆಗಳು ಬಂದಿದ್ದು, ಭೂಗತ ಜಗತ್ತಿನ ಡಾನ್ ದಾವೂದ್ ಇಬ್ರಾಹಿಂ ಪರವಾಗಿ ದುಬೈನಿಂದ ಕರೆ ಮಾಡುತ್ತಿದ್ದೇನೆ ಎಂದು ಹೇಳಿದ್ದಾನೆ. ಕರೆಗಳ ಬಗ್ಗೆ ಸ್ಥಳೀಯ ಪೊಲೀಸರಿಗೆ ತಿಳಿಸಲಾಗಿದೆ. ನಂತರ ಹೆಚ್ಚುವರಿ ಭದ್ರತಾ ಪಡೆಗಳನ್ನು ಬಂಗಲೆಯ ಹೊರಗೆ ನಿಯೋಜಿಸಲಾಗಿದೆ.

ABOUT THE AUTHOR

...view details