ಮುಂಬೈ:ನಗರದಲ್ಲಿ ಕೋವಿಡ್-19 ಸಂಬಂಧಿತ ಸಾವು-ನೋವುಗಳು ಅಧಿಕವಾಗುತ್ತಿದ್ದು, ಈ ಸಂದರ್ಭದಲ್ಲಿ ಮೇಯರ್ ಒಬ್ಬರು ನರ್ಸ್ ವೃತ್ತಿಗೆ ಮರಳಿದ್ದಾರೆ.
ಬೃಹನ್ಮುಂಬೈ ಮಹಾನಗರ ಪಾಲಿಕೆಯ (ಬಿಎಂಸಿ) ಮೇಯರ್ ಕಿಶೋರಿ ಪೆಡ್ನೇಕರ್ ನರ್ಸ್ ವೃತ್ತಿಗೆ ಮರಳಿದವರು. ರಾಜಕೀಯಕ್ಕೆ ಪಾದಾರ್ಪಣೆ ಮಾಡುವ ಮೊದಲು ಆಸ್ಪತ್ರೆಯೊಂದರಲ್ಲಿ ನರ್ಸ್ ಆಗಿ ಸೇವೆ ಸಲ್ಲಿಸಿದ್ದರು. ಇದೀಗ ಕೊರೊನಾ ರೋಗಿಗಳ ಸೇವೆಗೆಂದು ಬಿವೈಎಲ್ ನಾಯರ್ ಆಸ್ಪತ್ರೆಗೆ ನರ್ಸ್ ಆಗಿ ಬಂದಿದ್ದಾರೆ.