ಮುಂಬೈ:ಇಲ್ಲಿನ ಕುರ್ಲಾ ರೈಲ್ವೆ ನಿಲ್ದಾಣ ಪ್ರವೇಶಿಸಿದ ಸ್ಥಳೀಯ ಟ್ರೈನ್ವೊಂದು ಹಳಿ ತಪ್ಪಿದ ಪರಿಣಾಮ ಸಂಚಾರ ಅಸ್ತವ್ಯಸ್ತಗೊಂಡಿತು. ಇದರಿಂದ ಮುಂಬೈನಲ್ಲಿ ಸಂಚರಿಸುವ 50 ಸ್ಥಳೀಯ ರೈಲುಗಳು ರದ್ದಾದ ಘಟನೆಯೂ ನಡೆದಿದೆ.
ನಿನ್ನೆ ರಾತ್ರಿ 8:52ಕ್ಕೆ ಕುರ್ಲಾ ರೈಲ್ವೆ ನಿಲ್ದಾಣದ ಪ್ಲಾಟ್ಫಾರ್ಮ್ ನಂ3ಕ್ಕೆ ಬಂದ ಕಲ್ಯಾಣ್-116 ರೈಲು ಹಳಿತಪ್ಪಿತು. ಇದಕ್ಕೂ ಮುನ್ನ ಮಹಿಳಾ ಬೋಗಿಯಲ್ಲಿ ಶಾರ್ಟ್ಸರ್ಕ್ಯೂಟ್ ಸಂಭವಿಸಿ, ನಿಧಾನವಾಗಿ ರೈಲು ಚಲಿಸುತ್ತಾ ಬಂದಿದೆ. ಈ ಬಗ್ಗೆ ಕೆಲ ಮಹಿಳೆಯರು ರೈಲ್ವೆ ನಿಲ್ದಾಣದ ಅಧಿಕಾರಿಗಳ ಗಮನಕ್ಕೂ ತಂದಿದ್ದರು ಎಂದು ತಿಳಿದುಬಂದಿದೆ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ವರದಿಯಾಗಿದೆ.