ಕರ್ನಾಟಕ

karnataka

By

Published : Jul 27, 2019, 8:23 AM IST

Updated : Jul 27, 2019, 8:25 PM IST

ETV Bharat / bharat

ಮಹಾಮಳೆಗೆ ಮುಳುಗಿದ ಮಹಾಲಕ್ಷ್ಮಿ ಎಕ್ಸ್​​ಪ್ರೆಸ್​: 2 ಸಾವಿರ ಮಂದಿ ರಕ್ಷಣೆಗೆ ಹರಸಾಹಸ

ನಗರದಾದ್ಯಂತ ರಾತ್ರಿಯಿಂದ ಸುರಿದ ಭಾರೀ ಮಳೆಯಿಂದಾಗಿ ರಸ್ತೆಯೆಲ್ಲಾ ಜಲಾವೃತವಾಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಮಹಾಲಕ್ಷ್ಮಿ ಎಕ್ಸ್‌ಪ್ರೆಸ್ ರೈಲು ಸುಮಾರು 2,000 ಪ್ರಯಾಣಿಕರನ್ನು ಹೊತ್ತು ಬದ್ಲಾಪುರ ಮತ್ತು ವಂಗಾನಿ ನಿಲ್ದಾಣಗಳ ನಡುವೆ ನಿಂತಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ತಂಡ ಸ್ಥಳಕ್ಕೆ ತೆರಳಿ ರಕ್ಷಣಾ ಕಾರ್ಯದಲ್ಲಿ ನಿರತವಾಗಿದೆ.

ಮಹಾಲಕ್ಷ್ಮಿ ಎಕ್ಸ್‌ಪ್ರೆಸ್ ರೈಲು

ಮುಂಬೈ: ನಗರದಾದ್ಯಂತ ರಾತ್ರಿಯಿಂದ ಸುರಿದ ಭಾರೀ ಮಳೆಯಿಂದಾಗಿ ರಸ್ತೆಯೆಲ್ಲಾ ಜಲಾವೃತವಾಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಮಹಾಲಕ್ಷ್ಮಿ ಎಕ್ಸ್‌ಪ್ರೆಸ್ ರೈಲು ಸುಮಾರು 2,000 ಪ್ರಯಾಣಿಕರನ್ನು ಹೊತ್ತು ಬದ್ಲಾಪುರ ಮತ್ತು ವಂಗಾನಿ ನಿಲ್ದಾಣಗಳ ನಡುವೆ ನಿಂತಿದೆ. ಸಂಪೂರ್ಣ ನೀರಿನಲ್ಲಿ ಮುಳಗಿದ್ದು, ಕಳೆದ 11 ಗಂಟೆಗಳಿಂದ ಪ್ರಯಾಣಿಕರು ಮುಳುಗುವ ಭೀತಿಯಲ್ಲಿ ದಿನ ದೂಡಿದ್ದಾರೆ. ಇತ್ತ ಈಗಷ್ಟೇ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ತಂಡ ಸ್ಥಳಕ್ಕೆ ತೆರಳಿ ರಕ್ಷಣಾ ಕಾರ್ಯದಲ್ಲಿ ನಿರತವಾಗಿದೆ.

ವಾಣಿಜ್ಯ ನಗರಿ ಮುಂಬೈನಲ್ಲಿ ವರುಣನ ಆರ್ಭಟ ಯಥೇಚ್ಛವಾಗುತ್ತಿದ್ದು, ಇನ್ನೂ ಮೂರು- ನಾಲ್ಕು ದಿನಗಳ ಕಾಲ ಮಹಾರಾಷ್ಟ್ರದಾದ್ಯಂತ ಮಳೆಯ ಪ್ರಮಾಣ ಹೆಚ್ಚಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಮುಂಬೈ ನಗರದಲ್ಲಿ ಕಳೆದ 24 ಗಂಟೆಗಳಲ್ಲಿ 150-180 ಮಿ.ಮೀ ಮಳೆ ಸುರಿದಿದೆ. ಇಂದು ಕೂಡ ಹೆಚ್ಚು ಮಳೆ ಯಾಗಲಿದೆಯಂತೆ. ಉಳಿದಂತೆ ಹಲವೆಡೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.

ಮಹಾಮಳೆಗೆ ಮುಳುಗಿದ ಮಹಾಲಕ್ಷ್ಮಿ ಎಕ್ಸ್​​ಪ್ರೆಸ್

ನಗರದಾದ್ಯಂತ ರಾತ್ರಿಯಿಂದ ಸುರಿದ ಭಾರೀ ಮಳೆಯಿಂದಾಗಿ ರಸ್ತೆಯೆಲ್ಲಾ ಜಲಾವೃತವಾಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಮಹಾಲಕ್ಷ್ಮಿ ಎಕ್ಸ್‌ಪ್ರೆಸ್ ರೈಲು ಸುಮಾರು 2,000 ಪ್ರಯಾಣಿಕರನ್ನು ಹೊತ್ತು ಬದ್ಲಾಪುರ ಮತ್ತು ವಂಗಾನಿ ನಿಲ್ದಾಣಗಳ ನಡುವೆ ನಿಂತಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ತಂಡ ಸ್ಥಳಕ್ಕೆ ತೆರಳಿ ರಕ್ಷಣಾ ಕಾರ್ಯದಲ್ಲಿ ನಿರತವಾಗಿದೆ.

ಮುಂಬೈ ನಗರದ ಕುರ್ಲಾ, ಸಾಂತಾ ಕ್ರೂಸ್​, ಗಾಂಧಿ ಮಾರುಕಟ್ಟೆ, ಅಂಧೇರಿ, ಚಾರ್ನಿ ರಸ್ತೆ, ಬಿಕೆಸಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ರಸ್ತೆ ಮತ್ತು ರೈಲ್ವೆ ಹಳಿಗಳು ಜಲಾವೃತವಾಗಿದ್ದು, ರೈಲು ಸಂಚಾರಕ್ಕೂ ತೊಂದರೆಯಾಗಿದೆ. ಈಗಾಗಲೇ ಏಳು ವಿಮಾನಗಳ ಹಾರಾಟ ರದ್ದಾಗಿದ್ದು, 8-9 ವಿಮಾನಗಳ ಮಾರ್ಗವನ್ನ ಬದಲಾಯಿಸಲಾಗಿದೆ.

Last Updated : Jul 27, 2019, 8:25 PM IST

For All Latest Updates

TAGGED:

ABOUT THE AUTHOR

...view details