ಕರ್ನಾಟಕ

karnataka

ETV Bharat / bharat

ಮುಂಬೈನಲ್ಲಿ ಸಿಲಿಂಡರ್​ ಸ್ಫೋಟ ಪ್ರಕರಣ: ಓರ್ವ ಮಹಿಳೆ ಸಾವು, 9 ಜನರ ಸ್ಥಿತಿ ಚಿಂತಾಜನಕ - one women died in Mumbai Cylinder blast

ಲಾಲ್‌ಬಾಗ್ ಗಣೇಶ್‌ಗಲ್ಲಿಯ ಸಾರಾಭಾಯ್ ಕಟ್ಟಡದ ಎರಡನೇ ಮಹಡಿಯಲ್ಲಿ ಸಿಲಿಂಡರ್​ ಬ್ಲಾಸ್ಟ್​ಗೊಂಡಿದ್ದ ವೇಳೆ ಗಾಯಗೊಂಡಿದ್ದವರಲ್ಲಿ ಓರ್ವ ಮಹಿಳೆ ಮೃತಪಟ್ಟಿದ್ದಾರೆ.

Mumbai Cylinder blast Updat
ಮುಂಬೈನಲ್ಲಿ ಸಿಲಿಂಡರ್​ ಸ್ಫೋಟ ಪ್ರಕರಣ

By

Published : Dec 7, 2020, 9:43 AM IST

ಮುಂಬೈ: ಭಾನುವಾರ ಬೆಳಗ್ಗೆ ಮಂಬೈನ ಲಾಲ್‌ಬಾಗ್ ಗಣೇಶ್‌ಗಲ್ಲಿಯ ಬಹುಮಹಡಿ ಕಟ್ಟಡದಲ್ಲಿ ಸಂಭವಿಸಿದ್ದ ಸಿಲಿಂಡರ್ ಸ್ಫೋಟದಲ್ಲಿ ಗಾಯಗೊಂಡಿದ್ದ ಸುಶೀಲಾ ಬಾಗ್ರೆ (62) ಎಂಬ ಮಹಿಳೆ ಮೃತಪಟ್ಟಿದ್ದಾರೆ. ಬೆಂಕಿ ಅವಘಡದಲ್ಲಿ ಇನ್ನೂ 15 ಮಂದಿ ಗಾಯಗೊಂಡಿದ್ದು, ಅವರಲ್ಲಿ 9 ಮಂದಿ ಸ್ಥಿತಿ ಗಂಭೀರವಾಗಿದ್ದಾರೆ.

ಐದು ಅಂತಸ್ತಿನ ಸಾರಾಭಾಯ್ ಕಟ್ಟಡದ 2ನೇ ಮಹಡಿಯಲ್ಲಿ ಭಾನುವಾರ ಬೆಳಗ್ಗೆ 7:23ಕ್ಕೆ ಸಿಲಿಂಡರ್​ ಸ್ಫೋಟಗೊಂಡು 16 ಜನ ಗಾಯಗೊಂಡಿದ್ರು. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಗ್ಯಾಸ್​ ಲೀಕೆಜ್​​ನಿಂದಾಗಿ ಈ ದುರ್ಘಟನೆ ಸಂಭವಿಸಿತ್ತು.

ಇನ್ನು ಘಟನೆಯಲ್ಲಿ ಗಾಯಗೊಂಡ ಎಲ್ಲರಿಗೂ ಯಾವುದೇ ಕೊರತೆಯಾಗದಂತೆ ಚಿಕಿತ್ಸೆ ನೀಡಲು ಕೆಇಎಂ ಆಸ್ಪತ್ರೆ ಆಡಳಿತ ಮಂಡಳಿಗೆ ಮೇಯರ್ ಸೂಚಿಸಿದ್ದಾರೆ. ಸಂತ್ರಸ್ತ ಕುಟುಂಬಗಳಿಗೆ ಹತ್ತಿರದ ಹೋಟೆಲ್‌ನಲ್ಲಿ ವಸತಿ ಕಲ್ಪಿಸಲಾಗಿದ್ದು, ಹಾನಿಗೊಳಗಾದ ಮನೆಯನ್ನು ಕೂಡಲೇ ದುರಸ್ತಿ ಮಾಡುವಂತೆ ಎಂಎಚ್‌ಎಡಿಎ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಮೇಯರ್ ತಿಳಿಸಿದರು.

ABOUT THE AUTHOR

...view details